Composer : Shri Jagannatha dasaru
ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ
|| ಗಣಪತಿ ಸ್ತೋತ್ರ ||
ಅಂಬಿಕಾತನಯ ಭೂತಾಂಬರಾಧಿಪ ಸುರಕ –
ದಂಬ ಸಂಪೂಜ್ಯ ನಿರವದ್ಯ | ನಿರವದ್ಯ ನಿನ್ನ ಪಾ –
ದಾಂಬುಜಗಳೆಮ್ಮ ಸಲಹಲಿ || ೧ ||
ಗಜವಕ್ತ್ರ ಷಣ್ಮುಖಾನುಜ ಶಬ್ದ ಗುಣಗ್ರಹಕ
ಭುಜಗಕಟಿಸೂತ್ರ ಸುಚರಿತ್ರ | ಸುಚರಿತ್ರ ತ್ವತ್ಪದಾಂ –
ಬುಜಗಳಿಗೆ ಎರಗಿ ಬಿನ್ನೈಪೆ || ೨ ||
ವಿತ್ತಪತಿಮಿತ್ರಸುತ ಭೃತ್ಯಾನುಭೃತ್ಯನ ವಿ –
ಪತ್ತುಪಡಿಸುವ ಅಜ್ಞಾನ | ಅಜ್ಞಾನ ಬಿಡಿಸಿ ಮಮ
ಚಿತ್ತಮಂದಿರದಿ ನೆಲೆಗೊಳ್ಳೋ || ೩ ||
ಕಕುಭೀಶ ನಿನ್ನ ಸೇವಕನ ಬಿನ್ನಪವ ಚಿ –
ತ್ತಕೆ ತಂದು ಹರಿಯ ನೆನೆವಂತೆ | ನೆನೆವಂತೆ ಕರುಣಿಸೋ
ಅಕುಟಿಲಾತ್ಮಕನೆ ಅನುಗಾಲ || ೪ ||
ಮಾತಂಗವರದ ಜಗನ್ನಾಥವಿಠ್ಠಲನ ಸಂ –
ಪ್ರೀತಿಂದ ಭಜಿಸಿ ಸಾರೂಪ್ಯ | ಸಾರೂಪ್ಯವೈದಿ ವಿ –
ಖ್ಯಾತಿಯುತನಾದೆ ಜಗದೊಳು || ೫ ||
SrI jagannAthadAsArya viracita tattvasuvvAli
|| gaNapati stOtra ||
aMbikAtanaya BUtAMbarAdhipa suraka –
daMba saMpUjya niravadya | niravadya ninna pA –
dAMbujagaLemma salahali || 1 ||
gajavaktra ShaNmuKAnuja Sabda guNagrahaka
BujagakaTisUtra sucaritra | sucaritra tvatpadAM –
bujagaLige eragi binnaipe || 2 ||
vittapatimitrasuta BRutyAnuBRutyana vi –
pattupaDisuva aj~jAna | aj~jAna biDisi mama
cittamaMdiradi nelegoLLO || 3 ||
kakuBISa ninna sEvakana binnapava ci –
ttake taMdu hariya nenevaMte | nenevaMte karuNisO
akuTilAtmakane anugAla || 4 ||
mAtaMgavarada jagannAthaviThThalana saM –
prItiMda Bajisi sArUpya | sArUpyavaidi vi –
KyAtiyutanAde jagadoLu || 5 ||
Leave a Reply