Composer : Shri Gurugovinda dasaru
ಗಣಪತೇ – ಪಾಹಿ – ಗಣಪತೇ ||ಪ||
ಗಣಪತಿ ಪಾರ್ವತಿ ತನಯಾ |
ಭಕ್ತ ಜನಕೆ ಕೊಡುವುದು ವಿನಯಾ |
ಆಹ ಮನದೊಳು ನೀನಿಂತು |
ಅನುಗಾಲ ಹರಿಗುಣ ಗಣಗಳ ಪೊಗಳುವ |
ಮನವ ನೀ ಪಾಲಿಸೋ ||ಅ.ಪ.||
ಬಾಲೇಂದು ಮೌಳಿಯ ತನುಜ |
ವರ ಶೈಲಜೆ ಶರೀರ ಮಲಜಾ |
ಪುಟ್ಟಿ ಶ್ರೀಲೋಲ ಕೃಷ್ಣ ರುಕ್ಮಿಣಿಜ |
ನೆಂದು ಪೇಳುವರು ಮಾರನನುಜಾ |
ಆಹ ಕಾಳಗದೊಳು ಬಲು |
ಅಸುರರ ಅಸುಗಳ ಕೀಲಿಸುತಲಿ ಬಹು |
ಭೂಭಾರ ನಿಳುಹಿದ [೧]
ಸುಜ್ಞ ಭಕ್ತಾಧೀನ ಗಣಪಾ |
ಬಂದ ವಿಘ್ನಗಳ್ ಹರಿಸುವೆ ಭೂಪ |
ನೀನು ಭಗ್ನ ಗೈಸೋ ಮನಸ್ತಾಪಾ |
ಇಂಗಿತಜ್ಞ ಬೇಡುವೆ ತವ ಕೃಪಾ |
ಆಹ ಮಗ್ನ ಮಾಡಿಸು ಮನ |
ಮೊದಲಾದ ಕರುಣವ ಯಜ್ಞೇಶ ಶ್ರೀಹರಿ |
ಪದದ್ವಯ ವನಜದಿ [೨]
ಸಿಂಧುರಾಸ್ಯನೆ ಬಹು ಗುಣ |
ಪೂರ್ಣ ಮಂದರೋದ್ಧಾರಿಯೆ ಕರುಣ |
ಪಾತ್ರನೆಂದು ಹೊಕ್ಕೆನೊ ತವ ಚರಣ |
ಕಂದನೆಂದು ಕಾಯೆಲೊ ಬಹು ಕರುಣ |
ಆಹ ನಂದ ನಂದನ ಗುರು |
ಗೋವಿಂದ ವಿಠಲನ ಬಂಧುರ ಚರಣವಾ |
ನಂದದಿ ತುತಿಪಂತೆ [೩]
gaNapatE – pAhi – gaNapatE ||pa||
gaNapati pArvati tanayA |
Bakta janake koDuvudu vinayA |
Aha manadoLu nIniMtu |
anugAla hariguNa gaNagaLa pogaLuva |
manava nI pAlisO ||a.pa.||
bAlEMdu mauLiya tanuja |
vara Sailaje SarIra malajA |
puTTi SrIlOla kRuShNa rukmiNija |
neMdu pELuvaru mArananujA |
Aha kALagadoLu balu |
asurara asugaLa kIlisutali bahu |
BUBAra niLuhida [1]
suj~ja BaktAdhIna gaNapA |
baMda viGnagaL harisuve BUpa |
nInu Bagna gaisO manastApA |
iMgitaj~ja bEDuve tava kRupA |
Aha magna mADisu mana |
modalAda karuNava yaj~jESa SrIhari |
padadvaya vanajadi [2]
siMdhurAsyane bahu guNa |
pUrNa maMdarOddhAriye karuNa |
pAtraneMdu hokkeno tava caraNa |
kaMdaneMdu kAyelo bahu karuNa |
Aha naMda naMdana guru |
gOviMda viThalana baMdhura caraNavA |
naMdadi tutipaMte [3]
Leave a Reply