Composer : Shri Jayesha vittala
ಗಣನಾಥ ಮಣಿವೆನೊ ಗಣನಾಥ [ಪ]
ಘನ ವಿಶ್ವಾರಾಧಕ ವಿಘ್ನ ವಿದಾರಕ [ಅ.ಪ]
ಲಂಬ ಉದರ ವಿಳಂಬ ತಡೆಯಲಾರೆ
ಶಂಭುಗೆ ಪೇಳು ಭವಾಂಬುಧಿಗಂಬಿಗ [೧]
ಸ್ಕಂದನನುಜ ಭವ ಬಂಧನ ಮೋಚಕ
ಚಂದ್ರವರ್ಣ ಗಾತ್ರ ಸುಂದರ ಗಜವಕ್ತ್ರ [೨]
ಪ್ರಾಣಾವಿಷ್ಟ ಪ್ರಭು ಪ್ರಾಣಾ ಜಯೇಶ
ವಿಠಲನರಿಸುವ ವಿಘ್ನ ನಿವಾರಿಸು [೩]
gaNanAtha maNiveno gaNanAtha [pa]
Gana viSvArAdhaka viGna vidAraka [a.pa]
laMba udara viLaMba taDeyalAre
SaMBuge pELu BavAMbudhigaMbiga [1]
skaMdananuja Bava baMdhana mOcaka
caMdravarNa gAtra suMdara gajavaktra [2]
prANAviShTa praBu prANA jayESa
viThalanarisuva viGna nivArisu [3]
Leave a Reply