Composer : Shri Shyamasundara dasaru
ಆರಂಭದಲಿ ನಮಿಪೆ ಬಾಗಿ ಶಿರವ
ಹೇರಂಬ ನೀನೊಲಿದು ನೀಡೆಮಗೆ ವರವ ||ಪ||
ದ್ವಿರದ ವದನನೆ ನಿರುತ | ದ್ವಿರದ ವಂದ್ಯನ ಮಹಿಮೆ
ಹರುಷದಲಿ ಜಿಹ್ವೆ ಕರ ಎರಡರಿಂದ
ಬರೆದು ಪಾಡುವುದಕ್ಕೆ | ಬರುವ ವಿಘ್ನವ ತರಿದು
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ||೧||
ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರು
ಅಂಬರಾಧಿಪ ರಕುತಾಂಬರನೆ ನಿನ್ನ ||
ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿ
ಹಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ ||೨||
ಸೋಮ ಶಾಪದ ವಿಜಿತ | ಕಾಮ ಕಾಮಿತ ದಾತ
ವಾಮ ದೇವ ತನಯ ನೇಮದಿಂದ
ಶ್ರೀಮನೋಹರನಾದ ಶ್ಯಾಮಸುಂದರ ಸ್ವಾಮಿ ನಾಮ
ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||೩||
AraMBadali namipe bAgi Sirava
hEraMba nInolidu nIDemage – varava ||pa||
dvirada vadanane niruta | dvirada vaMdyana mahime
haruShadali jihve kara eraDariMda
baredu pADuvudakke | baruva vighnava taridu
karuNadiMdali enna karapiDidu salaheMdu ||1||
kuMBiNije pati rAma | jaMBAri dharmajaru
aMbarAdhipa rakutAMbarane ninna ||
saMBramadi pUjisidareMbavAruti kELi
haMbalava saliseMdu | naMbi ninnaDigaLige ||2||
sOma SApada vijita | kAma kAmita dAta
vAma dEva tanaya nEmadiMda
SrImanOharanAda SyAmasuMdara svAmi nAma
neneyuva BAgya prEmadali koDu eMdu ||3||
Leave a Reply