Composer : Shri Jagannatha dasaru
ಅಂಬಾತನಯ ಹೇರಂಬ ಪೂರ್ಣ ಕರು-
ಣಾಂಬುಧೆ ತವ ಚರಣಜಾಂಬುಜಕೆರಗುವೆ [ಪ]
ದಶನ ಮೋದಕ ಪಾಶಾಂಕುಶ ಪಾಣೆ
ಅಸಮ ಚಾರುದೇಷ್ಣ ವಂದಿಪೆ [೧]
ವೃಂದಾರಕ ವೃಂದ ವಂದಿತ ಚರಣಾರ
ವಿಂದಯುಗಳ ದಯದಿಂದ ನೋಡೆನ್ನ [೨]
ಯೂಥಪ ವದನ ಪ್ರದ್ಯೋತ ಸನ್ನಿಭ ಜಗ-
ನ್ನಾಥ ವಿಠ್ಠಲನ ಸಂಪ್ರೀತಿ ವಿಷಯ ಜಯ [೩]
aMbAtanaya hEraMba pUrNa karu-
NAMbudhe tava caraNajAMbujakeraguve [pa]
daSana mOdaka pASAMkuSa pANe
asama cArudEShNa vaMdipe [1]
vRuMdAraka vRuMda vaMdita caraNAra
viMdayugaLa dayadiMda nODenna [2]
yUthapa vadana pradyOta sanniBa jaga-
nnAtha viThThalana saMprIti viShaya jaya [3]
Leave a Reply