Govinda govinda krishna

Composer : Shri Vyasarajaru

ಗೋವಿಂದ ಗೋವಿಂದ ಕೃಷ್ಣ ಹರಿ [ಪ]
ಗೋವಿಂದ ಮುಕುಂದ ಗೋಪಾಲಕೃಷ್ಣ [ಅ.ಪ]

ಕಡೆಗಣ್ಣಿಲಿಂದೊಮ್ಮೆ ನೋಡೋ
ನಿ-ನ್ನಡಿಗೆರಗುವೆನೋ ನೀ ದಯಮಾಡೋ
ಬಿಡದೆನ್ನ ನಿನ್ನವರೊಳು ಕೂಡೋ
ಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ [೧]

ಮಕ್ಕಳಿಗೊಡೆಯ ನೀನಾಗಿ
ಹಸುಮಕ್ಕಳ ಕೂಡೆ ನೀನಾಡ ಹೋಗಿ
ಸಿಕ್ಕದೆ ಬಹು ದಿನಕಾಗಿ ದಿಂಧಿ-
ಮಿಕ್ಕೆಂದು ಕುಣಿಸುವೆ ಬಾ ಚೆನ್ನಾಗಿ [೨]

ಹೃದಯ ಕಮಲದೊಳಗೆನ್ನ
ನಿನ್ನ ಪದಕಮಲವ ನೀ ದಯಗೈಯೊ ಮುನ್ನ
ಚದುರ ಕುಣಿಯೊ ಚೆಲ್ವರನ್ನ ವಿ-
ಬುಧರೊಡೆಯನೆ ನಿತ್ಯಾನಂದ ಶ್ರೀ ಕೃಷ್ಣ [೩]


gOviMda gOviMda kRuShNa hari [pa]
gOviMda mukuMda gOpAlakRuShNa [a.pa]

kaDegaNNiliMdomme nODO
ni-nnaDigeraguvenO nI dayamADO
biDadenna ninnavaroLu kUDO
e-nnoDeya nityAnaMda nI nalidADO [1]

makkaLigoDeya nInAgi
hasumakkaLa kUDe nInADa hOgi
sikkade bahu dinakAgi diMdhi-
mikkeMdu kuNisuve bA cennAgi [2]

hRudaya kamaladoLagenna
ninna padakamalava nI dayagaiyo munna
cadura kuNiyo celvaranna vi-
budharoDeyane nityAnaMda shrI kRuShNa [3]

Leave a Reply

Your email address will not be published. Required fields are marked *

You might also like

error: Content is protected !!