Enna bimba murutiya

Composer : Shri Vyasarajaru

By Smt.Shubhalakshmi Rao

ಎನ್ನ ಬಿಂಬಮೂರುತಿಯ ಪೂಜಿಪೆ ನಾನು
ಮನಮುಟ್ಟಿ ಅನುದಿನ ಮರೆಯದೆ ಮರೆಯದೆ ||ಪ||

ಗಾತ್ರವೆ ಮಂದಿರ ಹೃದಯವೆ ಮಂಟಪ
ನೇತ್ರವೆ ಮಹದೀಪ ಹಸ್ತ ಚಾಮರವು
ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ
ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧||

ನುಡಿವ ಶಬ್ದಗಳೆಲ್ಲ ಹೂವುಗಳಾಯಿತು
ನಡೆವುದೆಲ್ಲವು ಬಹು ನಾಟ್ಯಂಗಳು
ಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರ
ಕೊಡುವ ಭೂಷಣವೆಲ್ಲ ದಿವ್ಯಾಭರಣ ||೨||

ಧರಿಸಿದ ಗಂಧವೆ ಚರಣಕ್ಕೆ ಗಂಧವು
ಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆ
ಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿ
ಅರಿತೊಡಲಿಗೆ ಉಂಬನ್ನವೆ ನೈವೇದ್ಯ ||೩||

ಎನ್ನ ಸ್ವರೂಪವೆಂಬುದೆ ರನ್ನಗನ್ನಡಿ
ಎನ್ನ ಮನೋವೃತ್ತಿ ಎಂಬುದೆ ಛತ್ರ
ಇನ್ನು ನುಡಿವ ಹರಿ ನಾಮಾಮೃತವೇ ತೀರ್ಥ
ಎನ್ನ ಮನವೆಂಬುದೆ ದಿವ್ಯ ಸಿಂಹಾಸನ ||೪||

ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆಯು ಯಾಕೆ
ಅನ್ಯವಾದ ಮಂತ್ರ ತಂತ್ರವ್ಯಾಕೆ
ಎನ್ನಲ್ಲಿ ಭರಿತ ಸಾಧನ್ನಂಗಳಿರುತಿರೆ
ಚೆನ್ನಾಗಿ ಶ್ರೀಕೃಷ್ಣ ಸ್ವಾಮಿಯ ಪೂಜಿಪೆ ||೫||


enna biMbamUrutiya pUjipe nAnu
manamuTTi anudina mareyade mareyade ||pa||

gAtrave maMdira hRudayave maMTapa
nEtrave mahadIpa hasta cAmaravu
yAtre pradakShiNe Sayana namaskAra
SAstra mAtugaLella maMtraMgaLu ||1||

nuDiva SabdagaLella hUvugaLAyitu
naDevudellavu bahu nATyaMgaLu
uDuva hodikeyella ucitavAda vastra
koDuva BUShaNavella divyABaraNa ||2||

dharisida gaMdhave caraNakke gaMdhavu
Siradalli muDiyuva puShpave mAle
sthiravAgi kUDida buddhiye Aruti
aritoDalige uMbannave naivEdya ||3||

enna svarUpaveMbude rannagannaDi
enna manOvRutti eMbude Catra
innu nuDiva hari nAmAmRutavE tIrtha
enna manaveMbude divya siMhAsana ||4||

anya dEvate yAke anya pratimeyu yAke
anyavAda maMtra taMtravyAke
ennalli Barita sAdhannaMgaLirutire
cennAgi SrIkRuShNa svAmiya pUjipe ||5||

Leave a Reply

Your email address will not be published. Required fields are marked *

You might also like

error: Content is protected !!