Composer : Shri Purandara dasaru
ರಾಮನಾಮ ಪಾಯಸಕ್ಕೆ
ಕೃಷ್ಣನಾಮ ಸಕ್ಕರೆ
ವಿಟ್ಠಲನಾಮ ತುಪ್ಪವ ಬೆರಸಿ
ಬಾಯಿ ಚಪ್ಪರಿಸಿರೊ ||ಪ||
ಒಮ್ಮಾನ ಗೋಧಿಯ ತಂದು
ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆ ತೆಗೆದು
ಸಣ್ಣ ಶಾವಿಗೆಯ ಹೊಸೆದು |೧|
ಹೃದಯವೆಂಬೊ ಪಾತ್ರೆಯೊಳಗೆ
ಭಾವವೆಂಬೊ ಎಸರನಿಟ್ಟು
ಬುದ್ಧಿಯಿಂದ ಪಾಕವ ಮಾಡಿ
ಹರಿವಾಣದೊಳಗೆ ಬಡಿಸಿ |೨|
ಆನಂದ ಆನಂದವೆಂಬೊ
ತೇಗು ಬಂದಾಗ ಎರಡು
ಆನಂದಮೂರುತಿ ನಮ್ಮ
ಪುರಂದರವಿಠಲನ ನೆನೆಯಿರೊ |೩|
rAmanAma pAyasakke
kRuShNanAma sakkare
viTThalanAma tuppava berasi
bAyi capparisiro ||pa||
ommAna gOdhiya taMdu
vairAgya kallali bIsi
summAne sajjige tegedu
saNNa SAvigeya hosedu |1|
hRudayaveMbo pAtreyoLage
BAvaveMbo esaraniTTu
buddhiyiMda pAkava mADi
harivANadoLage baDisi |2|
AnaMda AnaMdaveMbo
tEgu baMdAga eraDu
AnaMdamUruti namma
puraMdaraviThalana neneyiro |3|
Leave a Reply