Composer : Shri Vyasarajaru
ನೀನೆ ವರಗುರು ಮುಖ್ಯಪ್ರಾಣ
ನಿರಂತರವು ನಂಬಿದೆನೋ-ನಿಖಿಳ ಗುಣಪೂರ್ಣ ||ಪ||
ಜಾಣೆ ಕೋಮಲೆ ಭಾರತೀಶ ಸಕಲ
ಪ್ರಾಣಿಗಳ ಹೃದಯದಲಿ ವಾಸ ಸುರೇಶ ||ಅ.ಪ||
ವಾತಸುತನಾಗಿ ರಘುನಾಥ ಪ್ರಿಯದೂತ ಬಲು
ಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆ
ಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವ
ಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ ||೧||
ಲಂಡ ಕೀಚಕ ಬಕನ ಮಂಡೆಯನು ಒಡೆದು
ಉದ್ದಂಡ ಮಗಧಾಧಿಪನ ದಂಡವನು ಸೀಳಿ
ಭಂಡ ಕೌರವರ ಶಿರ ಚೆಂಡಾಡಿ ಪ್ರಬಲರಣ
ಮಂಡಲದಿ ಚಂಡರಿಪು ದಂಡಗಳ ಖಂಡಿಸಿದೆ ||೨||
ಸಾಂಗದಲಿ ಮಧ್ವಮತದಂಗವನು ಏರ್ಪಡಿಸಿ
ಕಂಗೆಟ್ಟ ಕುಮತಿ ದುಸ್ಸಂಗಗಳನಳಿದು
ಗಂಗೆ ಪಿತ ಕೃಷ್ಣಪದ ಭೃಂಗ ಮೂರ್ಜಗದೊಳಗೆ
ತುಂಗ ಭವಭಂಗ ದಯಾಪಾಂಗ ಯತಿಪುಂಗವನೆ ||೩||
nIne varaguru muKyaprANa
niraMtaravu naMbidenO-niKiLa guNapUrNa ||pa||
jANe kOmale BAratISa sakala
prANigaLa hRudayadali vAsa surESa ||a.pa||
vAtasutanAgi raGunAtha priyadUta balu
yUtha laMkeya pokku KyAtiyanu paDede
sIteguMguravittu vItihOtrage purava
prItenisidAta ditijAtarige BItikara ||1||
laMDa kIcaka bakana maMDeyanu oDedu
uddaMDa magadhAdhipana daMDavanu sILi
BaMDa kauravara Sira ceMDADi prabalaraNa
maMDaladi caMDaripu daMDagaLa KaMDiside ||2||
sAMgadali madhvamatadaMgavanu ErpaDisi
kaMgeTTa kumati dussaMgagaLanaLidu
gaMge pita kRuShNapada BRuMga mUrjagadoLage
tuMga BavaBaMga dayApAMga yatipuMgavane ||3||
Leave a Reply