Composer : Shri Gurugovinda dasaru
ಗೌರಿದೇವಿ ಪದಕೇ | ನಾರೇರು |
ಆರುತಿಯನು ಬೆಳಗೀ [ಪ]
ಆರುತಿಯನು ನಮ್ಮ | ಕಾರ್ತಿಕೇಯನ ಮಾತೆ
ಸಾರ ಸಾಕ್ಷಿಗೇ | ಭೂರಿ ಕರುಣಿಗೇ [ಅ.ಪ]
ಶ್ರೀ ಷಣ್ಮುಖ ಮಾತೇ | ಸುರಪತಿ |
ಲೇಸು ಗುರುವೇ ಖ್ಯಾತೇ | ವಾಸುಕಿ ಶಯನನ |
ಹಾಸಿಗೆನಿಪ ನಾಗಭೂಷಣ ಪ್ರಿಯ ಸತಿ |
ಪೋಷಿಸು ಸನ್ಮತಿ [೧]
ಮಂಗಳಾಂಗೆ ಗೌರೀ | ಹರಿಪದ |
ಭೃಂಗಳೆ ಮುರ ವೈರೀ | ರಂಗನ ಶುಭಗುಣ |
ಹಿಂಗದೆ ಪಾಡುವ ಮಂಗಳ ಮನವೀವ |
ಶೃಂಗರ ಕಾಯೇ [೨]
ಶರಧಿಜೆ ರುಕುಮಿಣಿಯಾ | ಪತಿ ಗುರು
ಗೋವಿಂದ ವಿಠ್ಠಲನಾ ವರನಾಮ ನುಡಿಸಲು |
ಪರಮ ಸಮರ್ಥಳು ಶಿರಬಾಗಿ ನಮಿಸುವ |
ಶರಣರ ಪಾಲಿಪ [೩]
gauridEvi padakE | nArEru |
Arutiyanu beLagI [pa]
Arutiyanu namma | kArtikEyana mAte
sAra sAkShigE | BUri karuNigE [a.pa]
SrI ShaNmuKa mAtE | surapati |
lEsu guruvE KyAtE | vAsuki Sayanana |
hAsigenipa nAgaBUShaNa priya sati |
pOShisu sanmati [1]
maMgaLAMge gaurI | haripada |
BRuMgaLe mura vairI | raMgana SuBaguNa |
hiMgade pADuva maMgaLa manavIva |
SRuMgara kAyE [2]
Saradhije rukumiNiyA | pati guru
gOviMda viThThalanA varanAma nuDisalu |
parama samarthaLu SirabAgi namisuva |
SaraNara pAlipa [3]
Leave a Reply