Arogane Maadamma

Composer : Shri Harapanahalli Bheemavva

Smt.Lakshmi

ಆರೋಗಣೆ ಮಾಡಮ್ಮ ಮಂಗಳಗೌರಿ
ಬೇಡಿಕೊಂಬೆನೆ ನಿನಗೆ |ಪ|
ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆ
ಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ||ಅ.ಪ||

ನಂದಿವಾಹನನರ್ಧಾಂಗಿಯ
ಪೂಜಿಸಿ ಗಂಧ ಕುಂಕುಮದಿಂದ
ತಂದು ಕಸ್ತೂರಿ ಕಮಲದ ಪುಷ್ಪಗಳುಡಿಯ
ತುಂಬಿ ನೈವೇದ್ಯವ ತಂದಿರಿಸುವೆ ತಾಯೆ |
ಅಚ್ಚ ಮುತ್ತಿನ ಹರಿವಾಣದಿ ಮಾಲತಿ
ಬಟ್ಟವಿ ಗೌಲಿಗಳು
ಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸ
ಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಂಬ |೧|

ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ
ದುಂಡುಗುಳ್ಳೋರಿಗೆಯು
ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯಿಗಳು
ಅಂದವಾದ ಕಾಯಿ ರಸ ಶಾಖ ಪಾಕವು |
ಸಣ್ಣ ಅಕ್ಕಿಯ ಶಾಲ್ಯಾನ್ನ ಕೊಪ್ಪುವ ತೊವ್ವೆ
ಇನ್ನು ದಧ್ಯನ್ನಗಳ
ಸನ್ಮತವಾಗಿಹ ಶಾವಿಗೆಫೇಣಿ ಸಕ್ಕರೆ
ರುಬ್ಬಿದ ಆಂಬೊಡೆ ಕಲಸನ್ನ |೨|

ಕ್ಶೀರ ದಧಿಯ ಬೆಣ್ಣೆ
ಘೃತ ಸೀಕರ್ಣೆ ಕಾಯ್ಹಾಲು ಹೊಯ್ಗಡುವನಿಟ್ಟು
ಸಾರು ಸಾಂಬಾರು ಚಟ್ಣಿ ಕೋಸಂಬರಿ
ನೀರೆ ನಿನಗೆ ಪನ್ನೀರು ತಂದಿರಿಸುವೆ |
ದೇವಿ ನಿನ್ನ ಮನೋಭಾವವ ತಿಳಿದು ನಾ
ಭೀಮೇಶ ಕೃಷ್ಣಗೆ ಬ್ಯಾಗ ಸಮರ್ಪಣೆ
ಮಾಡಲು ಮಹಾದೇವ ಸ್ವಾದ ಸವಿದು
ಸುಖದಿಂದುಂಡು ವಿಳ್ಯವ ಕೊಳ್ಳೆ |೩|


ArOgaNe mADamma maMgaLagauri
bEDikoMbene ninage |pa|
bEDidaDige eDe mADi taMdiTTihe
jODisi ninage kai mugivene mahAtAye ||a.pa||

naMdivAhananardhAMgiya
pUjisi gaMdha kuMkumadiMda
taMdu kastUri kamalada puShpagaLuDiya
tuMbi naivEdyava taMdirisuve tAye |
acca muttina harivANadi mAlati
baTTavi gauligaLu
aShTaguLLavu SAvige paraDi pAyasa
BakSha eNNOrige BAribaTTalu tuMba |1|

maMDige cUrmavu buMdya bIsOrige
duMDuguLLOrigeyu
ceMdavAgidda cakkuli karjikAyigaLu
aMdavAda kAyi rasa SAKa pAkavu |
saNNa akkiya SAlyAnna koppuva tovve
innu dadhyannagaLa
sanmatavAgiha SAvigePENi sakkare
rubbida AMboDe kalasanna |2|

ksheera dadhiya beNNe
GRuta sIkarNe kAyhAlu hoygaDuvaniTTu
sAru sAMbAru caTNi kOsaMbari
nIre ninage pannIru taMdirisuve |
dEvi ninna manOBAvava tiLidu nA
BImESa kRuShNage byAga samarpaNe
mADalu mahAdEva svAda savidu
suKadiMduMDu viLyava koLLe |3|

Leave a Reply

Your email address will not be published. Required fields are marked *

You might also like

error: Content is protected !!