Shri Sudheendra Tirtha charitre – Dirgha kriti

Composer : Shri Prasanna Srinivasa dasaru

By Smt.Shubhalakshmi Rao

ಶ್ರೀ ಸುಧೀಂದ್ರ ತೀರ್ಥ ಯತಿರಾಜರ ಚರಣ
ಬಿಸಜದ್ವಂದ್ವದಲಿ ನಾ ಶರಣಾದೆ ಸತತ
ಅಸಮ ಗುಣವಾರಿನಿಧಿ ಶ್ರೀರಾಮಚಂದ್ರ
ವ್ಯಾಸ ನರಹರಿ ಕೃಷ್ಣಸೈಂಧವಾಸ್ಯ ಪ್ರಿಯ (ಪ)

ಅಶೇಷ ಗುಣಸಿಂಧು ಶ್ರೀ ರಮಣ ಹಂಸನಿಗೆ
ಬಿಸಜಭವ ಸನಕಾದಿ ಗುರುಪರಂಪರೆಗೆ
ದಶ ಪ್ರಮತಿ ಪದಾಂಬುಜ ಯುಗ್ಮಕೆ ಮನಸಾ
ನಾ ಸದಾ ಸನ್ನಮಿಸಿ ಶರಣಾದೆ ಮುದದಿ (೧)

ಅರವಿಂದ ನಾಭ ನರಹರಿ ಮಾಧವತೀರ್ಥ
ಸೂರಿಕುಲ ತಿಲಕ ಅಕ್ಷೋಭ್ಯ ಜಯತೀರ್ಥ
ಪರ ವಿದ್ಯಾಕುಶಲ ಶ್ರೀ ವಿದ್ಯಾಧಿರಾಜ ರಾ
ಜೇಂದ್ರ ಚರಣಂಗಳಲಿ ಶರಣು ಶರಣಾದೆ (೨)

ಕೋವಿದ ಶಿರೋಮಣಿ ಕವೀಂದ್ರವಾಗೀಶರು
ಭಾವುಕಾಗ್ರಣಿ ರಾಮಚಂದ್ರ ವಿಭುದೇಂದ್ರ
ದೇವ ಹರಿಪ್ರಿಯ ಜಿತಾಮಿತ್ರ ರಘುನಂದನ
ದೇವಿ ತುಳಸೀಪತಿ ಒಲಿದಿಹ ಸುರೇಂದ್ರ (೩)

ಈ ಸರ್ವಗುರುಗಳ ಚರಣ ಕಮಲಗಳಲ್ಲಿ
ನಾಸರ್ವದಾ ಶರಣು ಶರಣೆಂಬೆ ಮುದದಿ
ಶ್ರೀ ವ್ಯಾಸಮುನಿ ಮಿತ್ರ ಶ್ರೀ ಸುರೇಂದ್ರರ ಕರ
ಸರಸಿಜಜ ಶ್ರೀ ವಿಜಯೀಂದ್ರರಿಗೆ ನಮಿಪೆ (೪)

ತೋಯಜೇಕ್ಷಣ ನಾರಾಯಣ ಲಕ್ಷ್ಮೀಗೆ
ಮುಖ್ಯವಾಯುಗೆ ಭಾರತಿಗೆ ಪ್ರಿಯತಮರು
ಜಯಶೀಲ ವಿಜಯೀಂದ್ರ ತೀರ್ಥರ ಕರದಿಂದ
ಅಭ್ಯುದಯರಾದರು ಸುಧೀಂದ್ರ ಯತಿವರರು (೫)

ಆಶ್ರಮೋಚಿತಕರ್ಮ ಜ್ಞಾನಪೂರ್ವಕವಾಗಿ
ಸುಶ್ರದ್ಧೆಯಲಿ ಆಚರಿಸುತ ಭಕ್ತಿಯಲಿ
ಶ್ರೀ ಕೃಷ್ಣಗೆ ಅರ್ಪಿಸುವ ಬ್ರಾಹ್ಮಣನ
ವಿಶ್ವಾಸದಿಂದ ನೇಮಿಸಿದರು ವಿಜಯೀಂದ್ರರು (೬)

ಗುರುಗಳ ಸೇವಿಸುತ ಆ ವಿಪ್ರವರನು
ಗುರು ವಿಜಯೀಂದ್ರರ ಮುಖಪದ್ಮದಿಂದ
ವರಮಧ್ವ ಸಚ್ಛಾಸ್ತ್ರ ಸರ್ವವಿದ್ಯಕಲಿತು
ಪರಾಪರವಿದ್ಯ ಪಾರಂಗತನು ಆದ (೭)

ಶ್ರೀ ಸುರೇಂದ್ರರಿಗೂ ಶ್ರೀ ವ್ಯಾಸರಾಜರಿಗೂ
ಈ ಸಾಧು ವಿಪ್ರನು ಪ್ರಿಯತರನಾಗಿದ್ದ
ಶ್ರೀ ಸುರೇಂದ್ರರು ಹೇಳಿ ಶ್ರೀ ವಿಜಯಿಂದ್ರರು
ನಿಶ್ಚಯಿಸಿದರು ಸಂಸ್ಥಾನಕ್ಕೆ ವಿಪ್ರನ್ನ (೮)

ಆ ದ್ವಿಜನೇ ವೇದಾಂತ ಪೀಠ ಏರಿ ಬ್ರಹ್ಮ
ಮೊದಲು ಇಕ್ಷ್ವಾಕು ವಂಶಜರು ಪಾಂಡವರು
ಮಧ್ವಮುನಿ ಪೂಜಿತನ ಅರ್ಚಿಸಲು ಯೋಗ್ಯನು
ಎಂದು ವಿಜಯೀಂದ್ರರು ನಿಶ್ಚಯ ಮಾಡಿದರು (೯)

ಶುಭದಿನದಿ ಶ್ರೀ ವಿಜಯೀಂದ್ರ ಗುರುವರ್ಯರು
ಆ ಪಂಡಿತೋತ್ತಮ ವಿಪ್ರನ್ನ ಕರೆದು
ಸುಪುಣ್ಯ ತುರೀಯಾಶ್ರಮವನ್ನ ಇತ್ತರು
ಸುಪವಿತ್ರ ಪ್ರಣವೋಪದೇಶ ಮಾಡಿದರು (೧೦)

ಬುದ್ದಿತೀಕ್ಷ್ಯಯುತ ಉದ್ದಾಮ ಪಾಂಡಿತ್ಯ
ಮಾಧವ ಮಧ್ವಾನುಗ್ರಹ ಪಾತ್ರತ್ವ
ಶ್ರೀದನಪರೋಕ್ಷ ಯೋಗ್ಯತೆಯನ್ನ ಕಂಡು
ಇತ್ತರು ಗುರುಗಳು ಸುಧೀಂದ್ರ ನಾಮವನು (೧೧)

ಗುರು ವಿಜಯೀಂದ್ರರು ಐವತ್ತು ಮೇಲೈದು
ವರುಷಸಂಸ್ಥಾನ ಆಳಿದರು ಶಕಶಾಲಿ
ವರುಷ ಹದನೈದು ನೂರ್ ಹದಿನೇಳು ಜೇಷ್ಠಹದಿ
ಮೂರನೇ ದಿನ ಅಸಿತ ಪಕ್ಷದ ವರೆಗೂ (೧೨)

ಸ್ಮರಿಸಿದಾಕ್ಷಣ ದುರಿತ ತರಿದು ಶುಭವೀವ
ಗುರು ಸಾರ್ವಭೌಮ ವಿಜಯೀಂದ್ರರು ಶ್ರೀಹರಿ
ಪುರವನ್ನೈದಲು ಸುಧೀಂದ್ರ ತೀರ್ಥರು
ಆರೋಹಿಸಿದರು ಸಂಸ್ಥಾನ ಪೀಠವನು (೧೩)

ಅರ್ಧಶತಮಾನಮೇಲ್ ತುರೀಯಾಶ್ರಮವಾಳಿ
ಮಧ್ವಮತವ ಲೋಕಸಜ್ಜನರಲ್ಲಿ
ವರ್ಧಿಸಿ ದುರ್ಮತ ಆಗಾಗ ಖಂಡಿಸುತ
ಸುಧೀಂದ್ರ ತೀರ್ಥರು ಕೀರ್ತಿಯ ಹೊಂದಿದರು (೧೪)

ಶ್ರೀ ವಿಜಯೀಂದ್ರರನುಗ್ರಹ ಪೂರ್ಣಪಾತ್ರರು
ದೇವತಾಂಶರು ಶ್ರೀ ಸುಧೀಂದ್ರ ಯತಿಯು
ದಿಗ್ವಿಜಯದಲಿ ಇವರ ಮಹಿಮೆಗಳ ಕಂಡು
ಸರ್ವರು ಎಲ್ಲೆಲ್ಲು ಮಾಡಿದರ್ ಮರ್ಯಾದೆ (೧೫)

ತಂಜಾವೂರ್ ಚೆಂಜಿ ಪೆನುಕೊಂಡ ವಿಜಯನಗರ
ರಾಜರು ಪಾಳೆಯಗಾರರು ಪಂಡಿತರು
ಪ್ರಜೆಗಳು ಸರ್ವರು ಸುಧೀಂದ್ರರ ಚರಣ
ಪೂಜಿಸಿ ಕೊಟ್ಟರು ಜಹಗೀರು ಕಾಣಿಕೆ (೧೬)

ಪೆನುಕೊಂಡ ಅಧಿಪತಿ ವೇಂಕಟರಾಯ
ರತ್ನಾಭೀಷೇಕ ಅನೇಕಸಲ ಮಾಡ್ದ
ರಘುನಾಥರಾಜನು ತಂಜಾವೂರಧಿಪ
ಕನಕಾಭೀಷೇಕಗಳ ಮಾಡಿದ ಇವರಿಗೆ (೧೭)

ಬಿಸಲಲ್ಲಿ ಬಾಡಿದ ಬಿಜಾಪುರದಲ್ಲಿ
ಶ್ರೀ ಸುಧೀಂದ್ರರು ಒಳ್ಳೆ ಮಳೆಯನ್ನ ಕರೆಸಿ
ಕಾಸಿಸುವ ಸೂರ್ಯನ್ನ ಘನಕಪ್ಪು ಮೇಘದಿಂ
ಮುಸುಕ್-ಹಾಕಿದಂತೆ ಮಾಡಿದರು ಈ ಧೀರ (೧೮)

ಮ್ಲೇಚ್ಛರಾಜ ಮಂತ್ರಿ ಮಳೆಕತ್ತಲೆ ನೋಡಿ
ಆಶ್ಚರ್ಯ ಚಕಿತರು ಆಗಿ ಸುಧೀಂದ್ರರ
ರಾಜ ಮರ್ಯಾದೆಯಿಂದಲಿ ಪೂಜಿಸಿದರು
ರಾಜನು ಜಹಗೀರ ಒದಗಿಸಿದ ಮುದದಿ (೧೯)

ಅಸುರರ ಸಸುತರು ದರಿದ್ರರ ಧನಿಕರು
ಬುಸು ಬುಸು ರೋಗಿಗಳ ಆರೋಗ್ಯವಂತರು
ಸಮಸ್ತ ಕೊರತೆ ಅಪಮೃತ್ಯುನೀಗಿಸಿ ಕರುಣಿ
ಶ್ರೀ ಸುಧೀಂದ್ರರು ಅದ್ಯಾಪಿ ಕಾಯ್ತಿಹರು (೨೦)

ಪದುಮಭವಪಿತ ಶ್ರೀ ಪದುಮಾಲಯಾಪತಿ
ನಿರ್ದೋಷ ಗುಣನಿಧಿ ಪ್ರಸನ್ನ ಶ್ರೀನಿವಾಸ
ಯದುಪತಿಗೆ ಪ್ರಿಯತರ ಸುಧೀಂದ್ರ ಗುರುವರ ನಿಮ್ಮ
ಪದುಮಾಂಘ್ರಿ ಯುಗ್ಮದಲಿ ಶರಣು ಮಾಂಪಾಹಿ (೨೧)


SrI sudhIMdra tIrtha yatirAjara caraNa
bisajadvaMdvadali nA SaraNAde satata
asama guNavArinidhi SrIrAmacaMdra
vyAsa narahari kRuShNasaiMdhavAsya priya (pa)

aSESha guNasiMdhu SrI ramaNa haMsanige
bisajaBava sanakAdi guruparaMparege
daSa pramati padAMbuja yugmake manasA
nA sadA sannamisi SaraNAde mudadi (1)

araviMda nABa narahari mAdhavatIrtha
sUrikula tilaka akShOBya jayatIrtha
para vidyAkuSala SrI vidyAdhirAja rA
jEMdra caraNaMgaLali SaraNu SaraNAde (2)

kOvida SirOmaNi kavIMdravAgISaru
BAvukAgraNi rAmacaMdra viBudEMdra
dEva haripriya jitAmitra raGunaMdana
dEvi tuLasIpati olidiha surEMdra (3)

I sarvagurugaLa caraNa kamalagaLalli
nAsarvadA SaraNu SaraNeMbe mudadi
SrI vyAsamuni mitra SrI surEMdrara kara
sarasijaja SrI vijayIMdrarige namipe (4)

tOyajEkShaNa nArAyaNa lakShmIge
muKyavAyuge BAratige priyatamaru
jayaSIla vijayIMdra tIrthara karadiMda
aByudayarAdaru sudhIMdra yativararu (5)

ASramOcitakarma j~jAnapUrvakavAgi
suSraddheyali Acarisuta Baktiyali
SrI kRuShNage arpisuva brAhmaNana
viSvAsadiMda nEmisidaru vijayIMdraru (6)

gurugaLa sEvisuta A vipravaranu
guru vijayIMdrara muKapadmadiMda
varamadhva sacCAstra sarvavidyakalitu
parAparavidya pAraMgatanu Ada (7)

SrI surEMdrarigU SrI vyAsarAjarigU
I sAdhu vipranu priyataranAgidda
SrI surEMdraru hELi SrI vijayiMdraru
niScayisidaru saMsthAnakke vipranna (8)

A dvijanE vEdAMta pITha Eri brahma
modalu ikShvAku vaMSajaru pAMDavaru
madhvamuni pUjitana arcisalu yOgyanu
eMdu vijayIMdraru niScaya mADidaru (9)

SuBadinadi SrI vijayIMdra guruvaryaru
A paMDitOttama vipranna karedu
supuNya turIyASramavanna ittaru
supavitra praNavOpadESa mADidaru (10)

budditIkShyayuta uddAma pAMDitya
mAdhava madhvAnugraha pAtratva
SrIdanaparOkSha yOgyateyanna kaMDu
ittaru gurugaLu sudhIMdra nAmavanu (11)

guru vijayIMdraru aivattu mElaidu
varuShasaMsthAna ALidaru SakaSAli
varuSha hadanaidu nUr hadinELu jEShThahadi
mUranE dina asita pakShada varegU (12)

smarisidAkShaNa durita taridu SuBavIva
guru sArvaBauma vijayIMdraru SrIhari
puravannaidalu sudhIMdra tIrtharu
ArOhisidaru saMsthAna pIThavanu (13)

ardhaSatamAnamEl turIyASramavALi
madhvamatava lOkasajjanaralli
vardhisi durmata AgAga KaMDisuta
sudhIMdra tIrtharu kIrtiya hoMdidaru (14)

SrI vijayIMdraranugraha pUrNapAtraru
dEvatAMSaru SrI sudhIMdra yatiyu
digvijayadali ivara mahimegaLa kaMDu
sarvaru ellellu mADidar maryAde (15)

taMjAvUr ceMji penukoMDa vijayanagara
rAjaru pALeyagAraru paMDitaru
prajegaLu sarvaru sudhIMdrara caraNa
pUjisi koTTaru jahagIru kANike (16)

penukoMDa adhipati vEMkaTarAya
ratnABIShEka anEkasala mADda
raGunAtharAjanu taMjAvUradhipa
kanakABIShEkagaLa mADida ivarige (17)

bisalalli bADida bijApuradalli
SrI sudhIMdraru oLLe maLeyanna karesi
kAsisuva sUryanna Ganakappu mEGadiM
musuk-hAkidaMte mADidaru I dhIra (18)

mlEcCharAja maMtri maLekattale nODi
AScarya cakitaru Agi sudhIMdrara
rAja maryAdeyiMdali pUjisidaru
rAjanu jahagIra odagisida mudadi (19)

asurara sasutaru daridrara dhanikaru
busu busu rOgigaLa ArOgyavaMtaru
samasta korate apamRutyunIgisi karuNi
SrI sudhIMdraru adyApi kAytiharu (20)

padumaBavapita SrI padumAlayApati
nirdOSha guNanidhi prasanna SrInivAsa
yadupatige priyatara sudhIMdra guruvara nimma
padumAMGri yugmadali SaraNu mAMpAhi (21)

Leave a Reply

Your email address will not be published. Required fields are marked *

You might also like

error: Content is protected !!