Karpuradaaratiya tandettire

Composer : Shri Vyasarajaru

Smt.Lakshmi

ಕರ್ಪೂರದಾರತಿಯ ತಂದೆತ್ತಿರೆ
ಚೆಲ್ವ ಸುಪ್ರಕಾಶಗೆ ಸುಜನರ ಕಾಯ್ವಗೆ
ಪಾಂಡವ ಭಾವಗೆ ದೇವರ ದೇವಗೆ [ಅ.ಪ]

ನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡು
ಅರ್ಜುನಪ್ರಿಯ ತಾನು ಕುಬುಜನಾಗಿ
ಹೆಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನ್ನು
ನಿರ್ಜಿಸಲು ಬಂದ ವಾಮನಗೆ,
ನಿಸ್ಸೀಮನಿಗೆ ಪೂರ್ಣ ಕಾಮನಿಗೆ [೧]

ನಳಿನನಾಭನೆ ಎಂದು ತಿಳಿದು ಬೇಗನೆ
ಬಲಿ ಕೆಳದಿಯ ಕರೆದು ಉದಕವ ತರಿಸಿ
ಚಲುವ ಪಾದವ ತೊಳೆದು, ಇಳೆಯ ದಾನವ ಮಾಡೆ
ನಳಿನಜಾಂಡಕ್ಕಾಗಿ ಬೆಳೆದವಗೆ,
ಬಹು ತಳೆದವಗೆ, ಭೂಮಿಯಳೆದವಗೆ [೨]

ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿಯ ಕೃಷ್ಣ
ಉಳಿದ ಭೂಮಿಯ ತೋರೆನ್ನುತ ನುಡಿಯೆ
ಸೆಲೆ ನಾಚಿಕೆಯಿಂದ ತನ್ನಳೆದುಕೋ ಎನ್ನ
ತಲೆಯ ಮೆಟ್ಟಿದ ಬಹು ವಿಕ್ರಮಗೆ
ಪರಾಕ್ರಮಗೆ ತ್ರಿವಿಕ್ರಮಗೆ [೩]


karpUradAratiya taMdettire
celva suprakASage sujanara kAyvage
pAMDava BAvage dEvara dEvage [a.pa]

nirjarEMdrana bali garjisutire kaMDu
arjunapriya tAnu kubujanAgi
hejje BUmiya bEDi baliya garvavannu
nirjisalu baMda vAmanage,
nissImanige pUrNa kAmanige [1]

naLinanABane eMdu tiLidu bEgane
bali keLadiya karedu udakava tarisi
caluva pAdava toLedu, iLeya dAnava mADe
naLinajAMDakkAgi beLedavage,
bahu taLedavage, BUmiyaLedavage [2]

baliya Baktige mecci celuva uDupiya kRuShNa
uLida BUmiya tOrennuta nuDiye
sele nAcikeyiMda tannaLedukO enna
taleya meTTida bahu vikramage
parAkramage trivikramage [3]

Leave a Reply

Your email address will not be published. Required fields are marked *

You might also like

error: Content is protected !!