Jaya madhwa vallabha

Composer : Shri Vadirajaru

By Smt.Shubhalakshmi Rao

“This song is in praise of the moola sanyasi disciples of Shri Madhwacharya including the first Swamijis of the Ashta Mathas of Udupi and Shri Padmanabha Teertharu. The Swamijis of the Ashta Mathas are referred to in the Paryaya order after tributes to Lord Krishna of Udupi and to Shri Mukhyaprana and his three avataras”.

Courtesy: Shri Venkatesh bhat


ಜಯ ಮಧ್ವವಲ್ಲಭ ಜಯ ಶುದ್ಧ ಸುಲ್ಲಭ
ಜಯ ಪದ್ಮನಾಭ ಉಡುಪಿನ
ಜಯ ಪದ್ಮನಾಭ ಉಡುಪಿನ ಶ್ರೀಕೃಷ್ಣ
ಜಯ ದುರ್ಜನರಿಗೆ ಅತಿದೂರ
ಸುವ್ವಿ ಸುವ್ವಿ ಸುವ್ವಾಲೆ [ಪ.]

ಸುರರ ಶಿರೋರನ್ನ ಗರುಡವಾಹನನೆ
ಕರುಣಸಂಪನ್ನ ಉಡುಪಿನ
ಕರುಣಸಂಪನ್ನ ಉಡುಪಿನ ಶ್ರೀಕೃಷ್ಣ
ಶರಣಾಗು ಧನ್ಯ ಜನರಿಗೆ (೧)

ಮೇಲೆ ಸತ್ಯಲೋಕ ಆಳುವ ಧೀರನೆ
ಶ್ರೀಲೋಲನಂಘ್ರಿ ಭ್ರಮರನೆ
ಶ್ರೀಲೋಲನಂಘ್ರಿ ಭ್ರಮರನೆ ಮುಖ್ಯಪ್ರಾಣ
ಭಾರತೀರಮಣಗೆ ಎರಗುವೆ (೨)

ರಾಮನಂಘ್ರಿಯ ಸೇವೆ ಪ್ರೇಮದಿಂ ಮಾಡಿದ
ಶ್ರೀಮಂತ ನಮ್ಮ ಹನುಮಂತ
ಶ್ರೀಮಂತ ನಮ್ಮ ಹನುಮಂತನೆಂದವಗೆ
ಕಾಮಿತಾರ್ಥಗಳ ಕೊಡುವನೆ (೩)

ಭಾರತ ಯುದ್ಧದಲಿ ಬಾಹುಬಲ ತೋರಿದ
ಧಾರಿಣೀಶ್ವರ ತಿಲಕನೆ
ಧಾರಿಣೀಶ್ವರ ತಿಲಕನೆ ಶ್ರೀ ಭೀಮ
ಸಾರಿದ ಜನರ ಸಲಹುವ (೪)

ಶುದ್ಧ ಶಾಸ್ತ್ರಗಳಿಂದ ಗೆದ್ದು ವಾದಿಗಳನು
ಹೊದ್ದಿದ ಜನರ ಕರುಣದಲಿ
ಹೊದ್ದಿದ ಜನರ ಕರುಣದಲಿ ಹೊರೆವ ಶ್ರೀ
ಮಧ್ವ ಮುನಿಪನ ಭಜಿಸುವೆ (೫)

ಹರಿಯ ಸತ್ಕರದಲ್ಲಿ ಕರುಣಂಗಳೊಡನೆ
ದುರುಳ ವಾದಿಗಳ ಗೆಲಿದನೆ
ದುರುಳ ವಾದಿಗಳ ಗೆಲಿದನೆ ಹೃಷಿಕೇಶ
ಗುರುಗಳಂಘ್ರಿಗೆ ನಮಿಸುವೆ (೬)

ದೇಶ ದೇಶದೊಳುಳ್ಳ ದೂಷಿವಾದಿಗಳನ್ನು
ದೂಷಿಸಿ ಹರಿಯ ಮಹಿಮೆಯನು
ದೂಷಿಸಿ ಹರಿಯ ಮಹಿಮೆಯ ಮೆರೆದ ಶ್ರೀ
ನೃಸಿಂಹತೀರ್ಥ ಯತಿರಾಯ (೭)

ಅದ್ವೈತವಾದಿಗಳ ಗೆದ್ದು ನಿರ್ಮಲವಪ್ಪ
ಮಧ್ವ ಮಾರ್ಗವನು ಜಗಕೆಲ್ಲ
ಮಧ್ವ ಮಾರ್ಗವನು ಜಗಕೆಲ್ಲ ತೋರಿದ ಜ-
ನಾರ್ದನತೀರ್ಥ ಯತಿರಾಯ (೮)

ಇಂದಿರೆಯರಸನ ಎಂದೆಂದು ಪೂಜಿಸಿ
ಮಂದಮಾಯಿಗಳ ಕುಮತವ
ಮಂದಮಾಯಿಗಳ ಕುಮತವ ಗೆಲಿದ ಉ-
ಪೇಂದ್ರತೀರಥ ಯತಿರಾಯ (೯)

ಈ ಮಹಿಯೊಳಗುಳ್ಳ ತಾಮಸ ಜನರನ್ನು
ಶ್ರೀಮಧ್ವ ಮುನಿಪನ್ನ ಮತದಿಂದ
ಶ್ರೀಮಧ್ವಮುನಿಪನ್ನ ಮತದಿಂದ
ಖಂಡಿಸಿ ವಾಮನತೀರ್ಥರೆಸೆದರು (೧೦)

ಧೀರ ತಾಪಸರಾಗಿ ಗುರುಮಧ್ವ ಮುನಿಯನು
ಚಾರುಚರಣಂಗಳ ಪಿಡಿದಿರ್ದ
ಚಾರುಚರಣಂಗಳ ಪಿಡಿದಿರ್ದ ಶ್ರೀವಿಷ್ಣು-
ತೀರಥರಡಿಗೆ ನಮಿಸುವೆ (೧೧)

ಕಾಮನ ನೆರೆ ಅಟ್ಟಿ ಶ್ರೀ ಮಹಾವಿಷ್ಣುವೇ
ಸ್ವಾಮಿ ಎಂಬುದನು ಜಗಕ್ಕೆಲ್ಲ
ಸ್ವಾಮಿ ಎಂಬುದನು ಜಗಕ್ಕೆಲ್ಲ ತೋರಿದ
ರಾಮತೀರಥ ಯತಿರಾಯ (೧೨)

ಮನುಮಥನಯ್ಯನ ಘನತೆಯ ತೋರಿಸಿ
ಜನರ ಮೋಹಗಳ ಬಿಡಿಸಿದ
ಜನರ ಮೋಹಗಳ ಬಿಡಿಸಿದ ಅಧೋಕ್ಷಜ
ಮುನಿಕುಲಾಗ್ರಣಿಗೆ ನಮಿಸುವೆ (೧೩)

ಮಧ್ವ ಕಿಂಕರರಾದ ಪದ್ಮನಾಭಾರ್ಯರ
ವಿದ್ಯಾ ವೈಭವಗಳ ಪೊಗಳುವ
ವಿದ್ಯಾ ವೈಭವಗಳ ಪೊಗಳುವ ಕವಿಯಾರು
ಶುದ್ಧ ಮುನಿಗಳಿಗೆ ಅಳವಲ್ಲ (೧೪)

ಸ್ವದೇವ ಹಯವದನನ ಆವಾಗ ಪೂಜಿಪ
ಪಾವನ್ನ ಮಧ್ವ ಮುನಿಪನ
ಪಾವನ್ನ ಮಧ್ವಮುನಿಪನ ಶಿಷ್ಯರಾದ
ದೇವತಾಂಶಗಳ ಮೊರೆಹೊಕ್ಕೆ (೧೫)


jaya madhvavallaBa jaya Suddha sullaBa
jaya padmanABa uDupina
jaya padmanABa uDupina SrIkRuShNa
jaya durjanarige atidUra
suvvi suvvi suvvAle [pa.]

surara SirOranna garuDavAhanane
karuNasaMpanna uDupina
karuNasaMpanna uDupina SrIkRuShNa
SaraNAgu dhanya janarige (1)

mEle satyalOka ALuva dhIrane
SrIlOlanaMGri Bramarane
SrIlOlanaMGri Bramarane muKyaprANa
BAratIramaNage eraguve (2)

rAmanaMGriya sEve prEmadiM mADida
SrImaMta namma hanumaMta
SrImaMta namma hanumaMtaneMdavage
kAmitArthagaLa koDuvane (3)

BArata yuddhadali bAhubala tOrida
dhAriNISvara tilakane
dhAriNISvara tilakane SrI BIma
sArida janara salahuva (4)

Suddha SAstragaLiMda geddu vAdigaLanu
hoddida janara karuNadali
hoddida janara karuNadali horeva SrI
madhva munipana Bajisuve (5)

hariya satkaradalli karuNaMgaLoDane
duruLa vAdigaLa gelidane
duruLa vAdigaLa gelidane hRuShikESa
gurugaLaMGrige namisuve (6)

dESa dESadoLuLLa dUShivAdigaLannu
dUShisi hariya mahimeyanu
dUShisi hariya mahimeya mereda SrI
nRusiMhatIrtha yatirAya (7)

advaitavAdigaLa geddu nirmalavappa
madhva mArgavanu jagakella
madhva mArgavanu jagakella tOrida ja-
nArdanatIrtha yatirAya (8)

iMdireyarasana eMdeMdu pUjisi
maMdamAyigaLa kumatava
maMdamAyigaLa kumatava gelida u-
pEMdratIratha yatirAya (9)

I mahiyoLaguLLa tAmasa janarannu
SrImadhva munipanna matadiMda
SrImadhvamunipanna matadiMda
KaMDisi vAmanatIrtharesedaru (10)

dhIra tApasarAgi gurumadhva muniyanu
cArucaraNaMgaLa piDidirda
cArucaraNaMgaLa piDidirda SrIviShNu-
tIratharaDige namisuve (11)

kAmana nere aTTi SrI mahAviShNuvE
svAmi eMbudanu jagakkella
svAmi eMbudanu jagakkella tOrida
rAmatIratha yatirAya (12)

manumathanayyana Ganateya tOrisi
janara mOhagaLa biDisida
janara mOhagaLa biDisida adhOkShaja
munikulAgraNige namisuve (13)

madhva kiMkararAda padmanABAryara
vidyA vaiBavagaLa pogaLuva
vidyA vaiBavagaLa pogaLuva kaviyAru
Suddha munigaLige aLavalla (14)

svadEva hayavadanana AvAga pUjipa
pAvanna madhva munipana
pAvanna madhvamunipana SiShyarAda
dEvatAMSagaLa morehokke (15)

Leave a Reply

Your email address will not be published. Required fields are marked *

You might also like

error: Content is protected !!