Pratigane nimma

Composer : Shri Jagannatha dasaru

By Smt.Shubhalakshmi Rao

Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur


ಪ್ರತಿಗಾಣೆ ನಿಮ್ಮ ಮಹಿಮಿಗೆ ಸತ್ಯಬೋಧ
ಯತಿಕುಲವರನೆ ನಿತ್ಯಾ ||ಪ||

ತುತಿಸಿ ವಂದಿಸುವೆ ತಾವಕರೊಳು ಗಣಿಸು ಅ-
ರ್ಥಿತ ಜನ ಚಿಂತಾಮಣಿ ಸತ್ಕರುಣೀ ||ಅ.ಪ||

ಶ್ರೀನಿವಾಸನ ಗುಣ ಸಾನುರಾಗದಲಿ
ವ್ಯಾಖ್ಯಾನ ಪೇಳುವ ಕಾಲದೀ
ಶ್ವಾನರೂಪದಿ ಪವಮಾನ ಜನರು ನೋಡಾ
ಕಾಣಿಸಿಕೊಂಡನಂದು ತಾ ಬಂದು ||೧||

ಬವರಗೋಸುಗ ಬಂದ ಯವನಾಧಿಪತಿ ನಿಮ್ಮ
ಸುವಿಚಿತ್ರ ಮಹಿಮೆ ಕಂಡೂ
ಪ್ರವಿನೀತನಾಗಿ ಕಪ್ಪವ ಕೊಟ್ಟು ನಮಿಸೀದ
ಕವಿ ಆವಾ ಈ ವಿಭವಾ ವರ್ಣಿಸುವಾ ||೨||

ಇವರು ದೇವಾಂಶರೆಂದರಿಪುಗೋಸುಗ ಬಂದು
ದಿವಿಜ ತರಂಗಿಣಿಯೂ
ಸವನಂಗ ಭೂರುಹ ಮೂಲಭಾಗದಲ್ಲಿ ಉ-
ದ್ಭವಿಸಿ ಕಂಗೊಳಿಸಿದಳೂ ಕೃಪಾಳೂ ||೩||

ಸ್ವಾಂತಸ್ಥ ಮುಖ್ಯಪ್ರಾಣಾಂತರಾತ್ಮಕ ಭಗ-
ವಂತನಂಘ್ರಿ ಕಮಲಾ
ಸಂತತ ಸರ್ವತ್ರ ಚಿಂತಿಸುತಿಪ್ಪ ಮ-
ಹಂತರೀಗೇನಚ್ಚರಾ ವಿಚಾರಾ ||೪||

ಮರುತಮತಾಬ್ಧಿ ಚಂದಿರ ಚಾರು ಚರಿತ ಭೂ –
ಸುರವರಸನ್ನುತನೇ
ಪರಮಪುರುಷ ಜಗನ್ನಾಥವಿಟ್ಠಲ ನಿಮ್ಮ
ಪರಿಪರಿಮಹಿಮೆ ಎಲ್ಲಾ ತಾ ಬಲ್ಲಾ ||೫||


pratigANe nimma mahimige satyabOdha
yatikulavarane nityA ||pa||

tutisi vaMdisuve tAvakaroLu gaNisu a-
rthita jana ciMtAmaNi satkaruNI ||a.pa||

SrInivAsana guNa sAnurAgadali
vyAKyAna pELuva kAladI
SvAnarUpadi pavamAna janaru nODA
kANisikoMDanaMdu tA baMdu ||1||

bavaragOsuga baMda yavanAdhipati nimma
suvicitra mahime kaMDU
pravinItanAgi kappava koTTu namisIda
kavi AvA I viBavA varNisuvA ||2||

ivaru dEvAMSareMdaripugOsuga baMdu
divija taraMgiNiyU
savanaMga BUruha mUlaBAgadalli u-
dBavisi kaMgoLisidaLU kRupALU ||3||

svAMtastha muKyaprANAMtarAtmaka Baga-
vaMtanaMGri kamalA
saMtata sarvatra ciMtisutippa ma-
haMtarIgEnaccarA vicArA ||4||

marutamatAbdhi caMdira cAru carita BU –
suravarasannutanE
paramapuruSha jagannAthaviTThala nimma
pariparimahime ellA tA ballA ||5||

Leave a Reply

Your email address will not be published. Required fields are marked *

You might also like

error: Content is protected !!