Composer: Shri Vishwendra tirtharu [Sode Matha – Rajesha hayamuka ankita]
ದೇವಾದಿದೇವ ಶ್ರೀ ತ್ರಿವಿಕ್ರಮರಾಯ
ದ್ಯಾವಾಭೂಮಿಗಳ ಮ್ಯಾಲ್ನಿನ್ನ ಕಾಯ ||
ಪಾದನಖಾಗ್ರದಿ ಬ್ರಹ್ಮಾಂಡವನ್ನು
ಭೇದಿಸಿ ಗಂಗೆಯ ಜನಿಸಿರ್ದ ಕಾಯ [ಪ]
ಅಣುರೂಪದಿಂದಿದ್ದು ಕ್ಷಣದೊಳಗದ್ಭುತ
ರೂಪವ ಧರಿಸಿ ಬಲಿಯ ಬಂಧಿಸಿದಿ |
ರಣ ಶಬ್ದವಿಲ್ಲದೆ ಸರ್ವ ಸಾಮ್ರಾಜ್ಯವ –
ನಗ್ರಜಗಿತ್ತಿಹ ಕಾರ್ಯವಾಶ್ಚರ್ಯ [೧]
ವಾದಿರಾಜರಿಗೆ ನೀ ಒಲಿದು ಶ್ರೀ ಸೋದೆಯೊಳ್
ನಿಂತಿದ್ದ ತೆರವತಿ ಚೋದ್ಯವಾಗಿಹುದು |
ಕದನವಾಗಿಲ್ಲ ಭೂಭುಜರಲ್ಲಿ ಒಲಿದುದು
ಹರಿಭಕ್ತರ್ಗತಿ ತೋಷಕಾರ್ಯ [೨]
ಕಂಜಾಕ್ಷ ಶ್ರೀಕೃಷ್ಣಗೋಲೆಯರ್ಪಿಸಿದ
ರಾಜೇಶ ಹಯಮುಖ ದಾಸರೆಂದೆನಿಪ |
ರಾಜ್ಯದೊಳಗತಿ ಮಾನ್ಯ ವಾದಿರಾಜರ ಭಾಗ್ಯ
ದೇವಾದಿದೇವ ಶ್ರೀ ತ್ರಿವಿಕ್ರಮರಾಯ [೩]
dEvAdidEva SrI trivikramarAya
dyAvAbhUmigaLa myAlninna kAya ||
pAdanaKAgradi brahmAMDavannu
BEdisi gaMgeya janisirda kAya [pa]
aNurUpadiMdiddu kShaNadoLagadButa
rUpava dharisi baliya baMdhisidi |
raNa Sabdavillade sarva sAmrAjyava –
nagrajagittiha kAryavAScarya [1]
vAdirAjarige nI olidu SrI sOdeyoL
niMtidda teravati cOdyavAgihudu |
kadanavAgilla BUBujaralli olidudu
hariBaktargati tOShakArya [2]
kaMjAkSha SrIkRuShNagOleyarpisida
rAjESa hayamuKa dAsareMdenipa |
rAjyadoLagati mAnya vAdirAjara BAgya
dEvAdidEva SrI trivikramarAya [3]
Leave a Reply