Composer : Shri Vadirajaru
ಬಿಡೆನೊ ಬಿಡೆನೊ ನಿನ್ನ ಚರಣಕಮಲವ ಎನ್ನ ||ಪ||
ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ ||ಅ.ಪ||
ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ
ನಳಿನೋದ್ಭವ ಬಂದು ಪಾದವ ತೊಳೆಯೆ
ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ
ಹರಿಪಾದ ತೀರ್ಥವೆಂದು ಹರ ಧರಿಸಿದನಾಗ ||೧||
ಆ ಪತಿಶಾಪದಿ ಅಹಲ್ಯೆ ಸಾಸಿರ ಯುಗ
ಪಾಷಾಣವಾಗುತ್ತ ಪಥದೊಳಗಿರಲು
ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು
ಪಾಪರಹಿತಳಾಗಿ ಪದವಿ ಕಂಡಳಾಗ ||೨||
ವಜ್ರಾಂಕುಶಧ್ವಜ ಪದುಮ ರೇಖೆಗಳಿಂದ
ಪ್ರಜ್ವಲಿಸುವ ನಿನ್ನ ಪಾದಪದ್ಮವನು
ಗರ್ಜಿಸಿ ಭಜಿಸುವೆ ಹಯವದನನೆ ಭವ-
ಜರ್ಜರ ಬಿಡಿಸುವನೆಂದು ನಂಬಿಹೆ ನಾನು ||೩||
biDeno biDeno ninna caraNakamalava enna ||pa||
hRudayamadhyadoLiTTu Bajisuve anudina ||a.pa||
baliya dAnava bEDi aLeye brahmAMDava
naLinOdBava baMdu pAdava toLeye
ugurina koneyiMda udisidaLA gaMge
haripAda tIrthaveMdu hara dharisidanAga ||1||
A patiSApadi ahalye sAsira yuga
pAShANavAgutta pathadoLagiralu
SrIpati ninnaya SrIpAda sOkalu
pAparahitaLAgi padavi kaMDaLAga ||2||
vajrAMkuSadhvaja paduma rEKegaLiMda
prajvalisuva ninna pAdapadmavanu
garjisi Bajisuve hayavadanane Bava-
jarjara biDisuvaneMdu naMbihe nAnu ||3||
Leave a Reply