Composer: Shri Gurugovinda dasaru
ಭೂತಪತೇ – ಭೂತಪತೇ [ಪ]
ಭೂತಿ ಮಹತ್ ಶ್ರುತಿ | ಪಾದ್ಯವೆನಿಪ
ಹರಿದೂತ ಬ್ರಾತ ಮಹ | ಭೂತ ಗಣಾಧಿಪ [ಅ.ಪ.]
ಕರ್ಣ ವಿಕರ್ಣರು | ಘನ್ನ ಗುಣಸಂ-
ಪನ್ನ ಮಹಿಮ ಮನ | ಬನ್ನವ ಕಳೆಯೋ (೧)
ರುಂಡ ಮಾಲೆ ಧರ | ಚಂಡ ಶಿವನ
ಪದಕೊಂಡೆ ವಾದಿ ಗಜ | ಸಿಂಹರೆನಿಪರಿಂ (೨)
ಗುರುವಾಣತಿ ಧೃತ | ಶಿರದಿ ಬದರಿಯಿಂಹರಿ
ಪ್ರತಿಮೆ ಸಹಿತ | ಶಿರನೀತ ವಿಮಾನ (೩)
ಬಂದುಕ ಕುಸುಮಗ | ಳಿಂದ ಅಲಂಕೃತ
ಸುಂದರಾಂಗ ಮನ | ಬಂಧಿಸುಹರಿಯಲಿ (೪)
ಬಿಂಬನು ಗುರು ಗೋವಿಂದ ವಿಠಲ
ಪದಡಿಂಬದಿ ಕಾಂಬುವ | ಹಂಬಲವೀಯೋ (೫)
BUtapatE – BUtapatE [pa]
BUti mahat Sruti | pAdyavenipa
haridUta brAta maha | BUta gaNAdhipa [a.pa.]
karNa vikarNaru | Ganna guNasaM-
panna mahima mana | bannava kaLeyO (1)
ruMDa mAle dhara | caMDa Sivana
padakoMDe vAdi gaja | siMharenipariM (2)
guruvANati dhRuta | Siradi badariyiMhari
pratime sahita | SiranIta vimAna (3)
baMduka kusumaga | LiMda alaMkRuta
suMdarAMga mana | baMdhisuhariyali (4)
biMbanu guru gOviMda viThala
padaDiMbadi kAMbuva | haMbalavIyO (5)
Leave a Reply