Endu karunadinda noduvi

Composer : Shri Krishna vittala

By Smt.Shubhalakshmi Rao

ಎಂದು ಕರುಣದಿಂದ ನೋಡುವಿ, ಧೀರೇಂದ್ರ ಗುರುವೆ |
ಎಂದು ನಮಗಾನಂದ ನೀಡುವಿ || ಪ ||

ಎಂದು ಕರುಣದಿಂದ ನೋಡುವಿ ನೊಂದು ಪಾಪದಿಂದ
ಬಳಲಿ ಬಂದು ನಿನ್ನ ಕಂದ ನೆಂ ತೆಂದು
ಪಾದ ಪೊಂದಿದವನ || ಅ. ಪ. ||

ದೂರದಿಂದ ದಣಿದು ಬಂದೆನೊ, ಯತಿರಾಯ
ಚಾರು ಬೃಂದಾವನ ಕಂಡೆನೊ |
ಭಾರಿ ಭಾರಿ ನೆರೆದು
ಪರಿವಾರವನ್ನು ನೋಡಿ ಮನಸು
ಸೇರಿಸಿದೆನೊ ತೋಷದಿಂದ
ನಿಮ್ಮ ಧೀರ ಚರಣದಲ್ಲಿ ||೧||

ಅಷ್ಟಗಂಧ ತುಲಸಿ ಮಾಲೆಯ, ಶಾಂತಿನೆಲೆಯ
ಇಟ್ಟ ಅಕ್ಷತಾ ರಕ್ಷಣಾ ಸಿರಿಯ
ಶಿಷ್ಟ ಶಾಟಿ, ದಂಡಧಾರಿ,
ಧೀರಸಿಂಹನಾದ ಗುರುವೆ
ಅಟ್ಟು ಎನ್ನ ಅಘದರಾಶಿ,
ನಿಷ್ಠೆಯಿಂದ ಭಜಿಪೆ ನಿಮ್ಮ ||೨||

ಶ್ರೇಷ್ಠ ನಿಮ್ಮ ಪಟ್ಟಣದೊಳು,
ಯತಿರಾಯ ಕೇಳು
ಧಿಟ್ಟವರದೆ ಮೆಟ್ಟಿ ಹರಿದಳು
ಮುಟ್ಟು ಸ್ನಾನ ಮಾಡಿದ
ಬಿಟ್ಟು ಹೋಗದು ಗ್ರಹ
ಶ್ರೀಕೃಷ್ಣ ವಿಠಲನ್ನ
ಭಜಿಪ ಯತಿವರೇಣ್ಯನೆ ಎನ್ನ ||೩||


eMdu karuNadiMda nODuvi, dhIrEMdra guruve |
eMdu namagAnaMda nIDuvi || pa ||

eMdu karuNadiMda nODuvi noMdu pApadiMda
baLali baMdu ninna kaMda neM– teMdu
pAda poMdidavana || a. pa. ||

dUradiMda daNidu baMdeno, yatirAya
cAru bRuMdAvana kaMDeno |
BAri BAri neredu
parivAravannu nODi manasu
sErisideno tOShadiMda
nimma dhIra caraNadalli ||1||

aShTagaMdha tulasi mAleya, SAMtineleya
iTTa akShatA rakShaNA siriya
SiShTa SATi, daMDadhAri,
dhIrasiMhanAda guruve
aTTu enna aGadarASi,
niShTheyiMda Bajipe nimma ||2||

SrEShTha nimma paTTaNadoLu,
yatirAya kELu
dhiTTavarade meTTi haridaLu
muTTu snAna mADida
biTTu hOgadu graha
SrIkRuShNa viThalanna
Bajipa yativarENyane enna ||3||

Leave a Reply

Your email address will not be published. Required fields are marked *

You might also like

error: Content is protected !!