Composer : Shri Varaha Vittala
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ಯೋಗಿ ಮನೆಗೆ ಬಾರೋ | ಶ್ರೀ ಸತ್ಯಬೋಧ ಮನೆಗೆ ಬಾರೋ |
ಸತ್ಯಪ್ರೀಯರ ಪ್ರಿಯ ಸತ್ಯಬೋಧಾರ್ಯ,
ಸೂರಿ ಜನರ ವಂದ್ಯ [ಅ.ಪ.]
ರತ್ನ ಖಚಿತವಾದ ಮಂಟಪದಲ್ಲಿ
ಬಲು ಸುಂದರ ಮೂಲ ರಘುಪತಿ ಪಾದ
ನಳಿನ ಯುಗ್ಮವ ಪೂಜಿಪ | ನಳಿನ ಯುಗ್ಮವ ಪೂಜಿಪ |೧ |
ವಿಷವ ಭುಂಜಿಸಿ ರಾತ್ರಿ ನಿದ್ರೆಯ ಜಯಿಸಿ |
ಹಸನಾಗಿ ದೇವತಾರ್ಚನೆಯ ಗೈದು
ರಾತ್ರಿ ಸೂರ್ಯನ ತೋರಿದಾ | ರಾತ್ರಿ ಸೂರ್ಯನ ತೋರಿದಾ |೨|
ಕಾಲಕಾಲಕ್ಕೆ ಭಕ್ತರನ್ನು ಕಾಯ್ದು |
ವರಹ ವಿಠ್ಠಲನ ಅನುದಿನ ಧ್ಯಾನಿಪ |
ಮಾರ್ಕಾಂಡೇಯ ರೂಪ | ಮಾರ್ಕಾಂಡೇಯ ರೂಪ |೩|
yOgi manege bArO | SrI satyabOdha manege bArO |
satyaprIyara priya satyabOdhArya,
sUri janara vaMdya [a.pa.]
ratna KacitavAda maMTapadalli
balu suMdara mUla raGupati pAda
naLina yugmava pUjipa | naLina yugmava pUjipa |1 |
viShava BuMjisi rAtri nidreya jayisi |
hasanAgi dEvatArcaneya gaidu
rAtri sUryana tOridA | rAtri sUryana tOridA |2|
kAlakAlakke Baktarannu kAydu |
varaha viThThalana anudina dhyAnipa |
mArkAMDEya rUpa | mArkAMDEya rUpa |3|
Leave a Reply