Varada teeradi

Composer : Shri Gurujagannatha dasaru

By Smt.Shubhalakshmi Rao

Shri Dhirendra Tirtharu:
ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |
ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |
धरणीमंडले ख्यातं धैर्यादिगुणबृंहितं ।
धिकृताशेषवादीभं धीरसिंहगुरुं भजे ।
Aradhana – Phalguna Shudda Trayodashi
Vrundavana – Hosaritti


ವರದಾ ತೀರದಿ ಶೋಭಿಪ | ಯತಿ |
ವರನ್ಯಾರೇ ಪೇಳಮ್ಮಯ್ಯಾ [ಪ]
ತ್ವರದಿ ಭಕುತರ ದುರಿತವ ತರಿದತಿ |
ತ್ವರದಿ ಪಾಲಿಪಾ ಧೀರೇಂದ್ರ ಕಾಣಮ್ಮಾ [ಅ. ಪ]

ಸುಂದರ ತಮ ವೃಂದಾವನ ಶುಭತರ |
ಮಂದಿರಗತನ್ಯಾರೇ ಪೇಳಮ್ಮಯ್ಯಾ |
ನಂದದಿ ಮಹಜನ ಸಂದಣಿ ಮಧ್ಯದಿ |
ಚಂದಿರ ತೆರದಿಹನ್ಯಾರೇ ಪೇಳಮ್ಮಯ್ಯಾ ||
ಇಂದಿರಪತಿ ಗುಣ ವೃಂದವ ಭಜಿಸುತ |
ನಂದದಿ ಶೋಭಿಪನ್ಯಾರೇ ಪೇಳಮ್ಮಯ್ಯಾ |
ಅಂಧ ಬದಿರರ ವೃಂದಗಳಿಗಿಷ್ಟವ |
ನಿಂದು ನೀಡುವ ವಾದೀಂದ್ರರ ತನುಜ |೧|

ಮೂಢ ಮತಿಯನು ಓಡಿಸಿ ಜನರಿಗೆ |
ಗಾಢ ಭಕುತಿಯನು ನೋಡಮ್ಮಯ್ಯಾ |
ಬೇಡುವ ಭಕುತರು ಮಾಡುವ ಸೇವೆಗೆ |
ನೀಡುವ ವರಗಳನ್ಯಾರೇ ನೋಡಮ್ಮಯ್ಯಾ ||
ಪಾಡುವ ದಾಸರು ಬೇಡುವ ಇಷ್ಟವ |
ನೀಡುವದಿನ್ಯಾರೇ ನೋಡಮ್ಮಯ್ಯಾ |
ರೂಢಿಯೊಳಗೆ ಇಷ್ಟ ನೀಡುವ ವಿಷಯದಿ |
ಜೋಡುಗಾಣೆನಾ ನೋಡಮ್ಮಯ್ಯಾ |೨|

ಭೂತ ಪೀಡೆ ಮಹ ಪ್ರೇತ ಪಿಶಾಚಿಯ |
ವ್ರಾತಗಳು ಬಲು ನೋಡಮ್ಮಯ್ಯಾ |
ಭೀತಿ ಬಡುತ ಮಹ ಆತುರದಲಿ ಈ |
ಭೂತಳ ಬಿಡುತಿಹವೋ ನೋಡಮ್ಮಯ್ಯಾ |
ಯಾತುಧಾನಗಣ ಈತನ ನಾಮದ ||
ಭೀತಿಗೆ ಪೋಗುತಿಹದು ನೋಡಮ್ಮಯ್ಯಾ |
ತಾತನ ತೆರದಲಿ ಈತನು ನಿಜಪದ |
ದೂತರ ಪೊರೆವನು ನೋಡಮ್ಮಯ್ಯಾ |
ದಾತ ಗುರು ಜಗನ್ನಾಥವಿಠ್ಠಲಗೆ |
ಪ್ರೀತ ಜನರೊಳು ಪ್ರೀತನೀತನಮ್ಮಾ |೩|


varadA tIradi SOBipa | yati |
varanyArE pELammayyA [pa]
tvaradi Bakutara duritava taridati |
tvaradi pAlipA dhIrEMdra kANammA [a. pa]

suMdara tama vRuMdAvana SuBatara |
maMdiragatanyArE pELammayyA |
naMdadi mahajana saMdaNi madhyadi |
caMdira teradihanyArE pELammayyA ||
iMdirapati guNa vRuMdava Bajisuta |
naMdadi SOBipanyArE pELammayyA |
aMdha badirara vRuMdagaLigiShTava |
niMdu nIDuva vAdIMdrara tanuja |1|

mUDha matiyanu ODisi janarige |
gADha Bakutiyanu nODammayyA |
bEDuva Bakutaru mADuva sEvege |
nIDuva varagaLanyArE nODammayyA ||
pADuva dAsaru bEDuva iShTava |
nIDuvadinyArE nODammayyA |
rUDhiyoLage iShTa nIDuva viShayadi |
jODugANenA nODammayyA |2|

BUta pIDe maha prEta piSAciya |
vrAtagaLu balu nODammayyA |
BIti baDuta maha Aturadali I |
BUtaLa biDutihavO nODammayyA |
yAtudhAnagaNa Itana nAmada ||
BItige pOgutihadu nODammayyA |
tAtana teradali Itanu nijapada |
dUtara porevanu nODammayyA |
dAta guru jagannAthaviThThalage |
prIta janaroLu prItanItanammA |3|

Leave a Reply

Your email address will not be published. Required fields are marked *

You might also like

error: Content is protected !!