Vadivaarana panchavadana

Composer : Shri Jagannatha dasaru

By Smt.Shubhalakshmi Rao

Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur


ವಾದಿವಾರಣ ಪಂಚವದನ |ಸತ್ಯ
ಬೋಧ ಸದ್ಗುರು ಜಿತಮದನ [ಪ]

ಬಾದರಾಯಣ ರಾಮ ವೈದೇಹಿ ಚರಣಾಬ್ಜ
ಆರಾಧಕನೆನಿಪೆ ಸುಮೋದವಿತ್ತು ಕಾಯೊ [ಅ.ಪ]

ಶ್ರೀ ಮಧ್ವ ಮತವಾರಿಧಿ ಸೋಮ | ದ್ವಿಜ
ಸ್ತೋಮ ಸದ್ಗುಣ ಗಣಧಾಮಾ |
ಕಾಮಿತಜನ ಕಲ್ಪ ಭೂಮಿಜ ವಿಬುಧ ಸು
ಪ್ರೇಮ ಸಂಯಮಿ ಕುಲೋದ್ಧಾಮ ದಯಾಂಬುಧೇ |
ಗೋಮಿನೀವಲ್ಲಭನ ಪದಯುಗ
ತಾಮರಸವನು ದಿನದಿ ಬಿಡದಲೆ
ನೇಮದಿಂದಲಿ ಭಜಿಸುತಿಪ್ಪ ಮಹಾ
ಮಹಿಮ ನಿನ್ನ ತುತಿಸಬಲ್ಲನೆ [೧]

ದೀನಜನರ ಬಂಧು ನಿನ್ನಾ | ಪಾದ
ಕಾನಮಿಸುವೆ ಸುಪ್ರಸನ್ನಾ
ದಾನ ಮಾನಗಳಿಂದ ಜ್ಞಾನಿ ಜನರಿಗೆ
ಆನಂದ ಬಡಿಸುತ ಸಾನುರಾಗದಿ ನಿತ್ಯಾ
ಶ್ರೀ ನಿಕೇತನ ಪರಮ ಕಾರು
ಣ್ಯಾ ನಿವಾಸ ಸ್ಥಾನನೆನಿಪ ಮ
ಹಾನು ಭಾವ ಭಗವತ್ಪದಾಂಭೋ
ಜಾಣುಗರ ಅಣುವೆಂದು ಪಾಲಿಸು [೨]

ಸತ್ಯಪ್ರಿಯರ ಕರಕಮಲ | ಜಾತ
ನಿತ್ಯ ನಿರ್ಜಿತ ಘೋರ ಶಮಲಾ
ಚಿತ್ತಜಪಿತ ಜಗನ್ನಾಥ ವಿಠ್ಠಲನ್ನ
ಚಿತ್ತಾನು ವೃತ್ತಿಗಳಾಗಿ ಸಂತೈಸುತ್ತಾ
ಅತ್ಯಧಿಕ ಸಂತೋಷದಿಂದಲಿ
ಪ್ರತ್ಯರ್ಥಿಗಳಿಗುತ್ತರಿಸಿ ಮಿಗೆ ಪುರು
ಷೋತ್ತಮನೆ ಪರನೆಂದು ಡಂಗುರ
ವೆತ್ತಿ ಹೊಯ್ಸಿ ಕೃತಾರ್ಥನೆನಿಸಿದೆ [೩]


vAdivAraNa paMcavadana |satya
bOdha sadguru jitamadana [pa]

bAdarAyaNa rAma vaidEhi caraNAbja
ArAdhakanenipe sumOdavittu kAyo [a.pa]

SrI madhva matavAridhi sOma | dvija
stOma sadguNa gaNadhAmA |
kAmitajana kalpa BUmija vibudha su
prEma saMyami kulOddhAma dayAMbudhE |
gOminIvallaBana padayuga
tAmarasavanu dinadi biDadale
nEmadiMdali Bajisutippa mahA
mahima ninna tutisaballane [1]

dInajanara baMdhu ninnA | pAda
kAnamisuve suprasannA
dAna mAnagaLiMda j~jAni janarige
AnaMda baDisuta sAnurAgadi nityA
SrI nikEtana parama kAru
NyA nivAsa sthAnanenipa ma
hAnu BAva BagavatpadAMBO
jANugara aNuveMdu pAlisu [2]

satyapriyara karakamala | jAta
nitya nirjita GOra SamalA
cittajapita jagannAtha viThThalanna
cittAnu vRuttigaLAgi saMtaisuttA
atyadhika saMtOShadiMdali
pratyarthigaLiguttarisi mige puru
ShOttamane paraneMdu DaMgura
vetti hoysi kRutArthaneniside [3]

Leave a Reply

Your email address will not be published. Required fields are marked *

You might also like

error: Content is protected !!