Composer : Shri Jagannatha dasaru
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ನಾ ಧನ್ಯನಾದೆನಿಂದು ಸತ್ಯಬೋಧರಾಯರ
ದಿವ್ಯ ಪಾದ ಪದುಮ ಕಂಡು || ಪ ||
ಹಿಂಗಿದವು ಅಖಿಳ ದೋಷಂಗಳು ಈಮುನಿ
ಪುಂಗವರಂಘ್ರಿ ಸಂದರುಶನದಿ |
ಗಂಗಾದಿ ಮೊದಲಾದ ಮಂಗಳ ಯುತವಾದ |
ತುಂಗ ಯಾತ್ರೆಯ ಫಲ ತಾ ಸಮವೆನಿಸಿತು || ೧ ||
ಆವ ಮುನಿಗಳೋ ಮತ್ತಾವ ದೇವತೆಗಳೋ |
ಆವರು ಬಲ್ಲರು ಇವರ ಮಹಿಮೆ |
ಸೇವಿಪ ಸುಜನರ ಕೃಪಾವಲೋಕನದಿಂದ |
ಪಾವನ ಮಾಡುವ ಕೋವಿದಾರ್ಯರ ಕಂಡು || ೨ ||
ಸೀತಾರಮಣ ಜಗನ್ನಾಥ ವಿಠ್ಠಲರೇಯ
ಭೂತಳದೊಳಗೀ ಮಹಾತ್ಮರನ್ನು |
ಪ್ರೀತಿಯಿಂ ಸೃಜಿಸಿರಲು ಜಗದಿ ಜೀವರ |
ಪುನೀತರನು ಮಾಡುವರಾದುದಕೆ ಈ ಕ್ಷಣದಿ || ೩ ||
nA dhanyanAdeniMdu satyabOdharAyara
divya pAda paduma kaMDu || pa ||
hiMgidavu akhiLa dOShaMgaLu eemuni
puMgavaraMghri saMdarushanadi |
gaMgAdi modalAda maMgaLa yutavAda |
tuMga yAtreya phala tA samavenisitu || 1 ||
Ava munigaLO mattAva dEvategaLO |
Avaru ballaru ivara mahime |
sEvipa sujanara kRupAvalOkanadiMda |
pAvana mADuva kOvidAryara kaMDu || 2 ||
seetAramaNa jagannAtha viThThalarEya
bhootaLadoLagee mahAtmarannu |
preetiyiM sRujisiralu jagadi jeevara |
puneetaranu mADuvarAdudake ee kShaNadi || 3 ||
Leave a Reply