Bho Guru Dheerendra

Composer : Shri Hari Vittala

By Smt.Shubhalakshmi Rao

Shri Dhirendra Tirtharu:
ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |
ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |
धरणीमंडले ख्यातं धैर्यादिगुणबृंहितं ।
धिकृताशेषवादीभं धीरसिंहगुरुं भजे ।
Aradhana – Phalguna Shudda Trayodashi
Vrundavana – Hosaritti


ಭೋಗುರು ಧೀರೇಂದ್ರ | ಶುಭಗುಣ | ವಾರಿಧಿ ಯೋಗಿಂದ್ರ |ಪ|
ಭಾಗವತಾಗ್ರಣಿ ಗುರು ರಾಘವೇಂದ್ರರ |
ರಾಗದಿ ಭಜಿಸುವ ಯೋಗಿಗಳರಸನೆ | ಅ.ಪ |

ವೃತ್ತಿ ಮಂದಿರವಾಸಾ |
ಭಜಕರಿ ಗಿತ್ತು ಮನೋಲ್ಲಾಸಾ | –
ಹೊತ್ತು ಹೊತ್ತಿಗೆ ಶ್ರೀಶಾ | ನಂಘ್ರಿಯ |
ಭಕ್ತಿಲವರ ಮನಸಾ |
ಬಿತ್ತಿ ಬೆಳಸಿ ಭವಮುಕ್ತರ ಮಾಡಲು |
ಅತ್ಯಂತ ಹರುಷದಿ ಯತಿವರನಾಗಿಹ || ೧||

ಒಂದುದಿನದಿ ನಿಮ್ಮ ನೆನೆದರೆ
ಬೆಂದವು ಭವಪಾಶ |
ಛಂದದಿಂದ ನಿಮಗೆ | ನಮಿಸಲು |
ಮಂದಿನಘದ ನಾಶ |
ಇಂದಿರೆಯರಸ ಗೋವಿಂದನ ಕರುಣವ |
ಇಂದು ಮುಂದೆ ಸದಾ ತಂದು ಕೊಡುವೊ ಮುನಿ || ೨ ||

ಧೀ ಎನ್ನೆ ಸ್ಥಿರ ಮನಸು |
ಆಹೊದು ಈರ ನಾಮಕನಲ್ಲಿ |
ಈರನೆನ್ನೆ ಪ್ರಾಣ |
ರಾಯಗ ಪಾರ ಸಂತಸವಹುದು |
ಇಂದ್ರನಾಮಗೆ ನಮೋ ಎನಲು ಉ |
ಪೇಂದ್ರ ನಾಮಕ ತ್ರಿವಿಕ್ರಮನೊಲಿವನೋ || ೩ ||

ಅನ್ವಯಾರ್ಥ ಉಳ್ಳ ನಾಮದ |
ಘನ್ನಮಹಿಮೆಯರಿಯೆ |
ಉನ್ನತ ರಯಿಪ್ರಾಣಾ | ದ್ಯರ |
ಘನ್ನ ಪ್ರೇರಕ ಹರಿಯ ||
ಚಿನ್ಮಯರೂಪವ ಚೆನ್ನಾಗಿ ನೆನೆಯುವ |
ಸನ್ನುತ ಮಹಿಮ ಧೀರೇಂದ್ರ ಯತೀಂದ್ರಾ | ೪ |

ಗುರುವರ ವರದೇಂದ್ರ | ಯತಿವರ |
ಕರಕಮಲ ಕಂಜ |
ಋಜುವರ ವಾದಿರಾಜ | ರಂಘ್ರಿ |
ಸರಸಿಜಯುಗಭೃಂಗ
ವರದ ಶ್ರೀಪ್ರಹಲ್ಲಾದ ಹರಿವಿಠಲ |
ನರ ಹರಿ ಶಿರಿಗೆನ್ನ ಶಿರವೆರಗಲಿ ಸದಾ || ೫ |


BOguru dhIrEMdra | SuBaguNa | vAridhi yOgiMdra |pa|
BAgavatAgraNi guru rAGavEMdrara |
rAgadi Bajisuva yOgigaLarasane | a.pa |

vRutti maMdiravAsA |
Bajakari gittu manOllAsA | –
hottu hottige shrISA | naMGriya |
Baktilavara manasA |
bitti beLasi Bavamuktara mADalu |
atyaMta haruShadi yativaranAgiha || 1||

oMdudinadi nimma nenedare
beMdavu BavapASa |
CaMdadiMda nimage | namisalu |
maMdinaGada nASa |
iMdireyarasa gOviMdana karuNava |
iMdu muMde sadA taMdu koDuvo muni || 2 ||

dhI enne sthira manasu |
Ahodu Ira nAmakanalli |
Iranenne prANa |
rAyaga pAra saMtasavahudu |
iMdranAmage namO enalu u |
pEMdra nAmaka trivikramanolivanO || 3 ||

anvayArtha uLLa nAmada |
Gannamahimeyariye |
unnata rayiprANA | dyara |
Ganna prEraka hariya ||
cinmayarUpava cennAgi neneyuva |
sannuta mahima dhIrEMdra yatIMdrA | 4 |

guruvara varadEMdra | yativara |
karakamala kaMja |
Rujuvara vAdirAja | raMGri |
sarasijayugaBRuMga
varada SrIprahallAda hariviThala |
nara hari Sirigenna Siraveragali sadA || 5 |

Leave a Reply

Your email address will not be published. Required fields are marked *

You might also like

error: Content is protected !!