Siri Satyavrata Sura taruve

Composer : Shri Gurugovinda dasaru

By Smt.Shubhalakshmi Rao

ShrI Satyavrata tIrtharu – 1635-1638
Aradhana – Phalguna Shukla Shashti
ವೇದನಿಧ್ಯಾಲವಾಲೋತ್ಥ: ವಿದುಷಾಂ ಚಿಂತಿತಪ್ರದ: |
ಸತ್ಯವ್ರತಾಖ್ಯಕಲ್ಪದ್ರು: ಭೂಯಾದಿಷ್ಟಾರ್ಥಸಿದ್ದಯೇ ||
वेदनिध्यालवालोत्थ: विदुषां चिंतितप्रद: ।
सत्यव्रताख्यकल्पद्रु: भूयादिष्टार्थसिद्धये ।
Vrundavana – Sangli, Maharashtra


ಶಿರಿ ಸತ್ಯವ್ರತ ಸುರ ತರುವೆ ನಿಮ್ಮಯ ಪಾದ
ವರಶತ ಪತ್ರಕ್ಕೆ ಅಭಿನಮಿಪೇ [ಪ]

ಪರಮ ದುರ್ಮತ ದ್ವಾಂತ ಭಾಸ್ಕರವರ
ಸುಜ್ಞಾನಾಕಾಂಕ್ಷಿ ಯಾಗಿಹೆ
ನಿರತ ಶ್ರೀಮದಾನಂದ ತೀರ್ಥರ ವರ
ಸುಭಾಷ್ಯಾಮೃತವ ನುಣಿಸೋ [ಅ.ಪ]

ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯ
ಜನದಿ ವಿಖ್ಯಾತರೆ ಗುರುವೇ |
ಸುಗುಣಿತವ ಭಕ್ತರ್ಗೆ ಕಾಡುವ ವಿಗಡ
ಅಪಸ್ಮಾರ ಕುಷ್ಠವು
ಮಿಗಿಲು ರೋಗಾದಿಗಳ ಕಳೆಯುತ
ಬಗೆ ಬಗೆಯಿಂದಲಿ ಸ್ತುತ್ಯರಾಗಿಹ [೧]

ಸರಿತು ಪ್ರವಹದಿ ಎರಡೆರಡು ಸುತರ್ಗಳ
ಹರಣ ಪೋಗಲು ಖೇದದೀ |
ವರ ದ್ವಿಜನು ರಘುನಾಥಾಖ್ಯ
ಭಕ್ತಿಲಿ ಶಿರಿ ಸತ್ಯವ್ರತರನು ಸೇವೆಗೈಯ್ಯಲು
ಅರಿತು ಸಂತಾನಾಷ್ಟ ಕಂಗಳ
ತ್ವರಿತ ಕರುಣಿಸಿ ಪೊರೆದ ಗುರುವರ [೨]

ಶಿರಿಸತ್ಯ ಸಂಧರೀ ವೃಂದಾವನದ ಬಳಿ
ಶಿರಿಮನ್ಯಾಯಾಸುಧೆ ಪಠಿಸೇ |
ಗುರುವರರು ಸಂತುಷ್ಟ ಪಡುತಲಿ
ಶಿರವ ತೂಗಲು ಅಂತರಂಗದಿ
ವರ ಸುವೃಂದಾವನವು ತನ್ನಯ ಶಿರವ
ತೂಗುತ ತೋರಿತಚ್ಛರಿ [೩]

ವಾದಿ ಭಹರ್ಯಕ್ಷ ಮೇಧಾವಿ
ವಿಭುಧೇಡ್ಯ ಸುಧಾಪಿವೃತಿ ಕರ್ತಾರ |
ಮೇಧಿನಿಯ ಸಂಚರಿಸಿ ದುರ್ವಾದಿಗಳ
ಬಲು ಖಂಡಿಸುತ
ಭೋಧಿಸುತ ತತ್ವಗಳ ಸುಜನಕೆ ಹಾದಿ
ಮೋಕ್ಷಕೆ ತೋರ್ದ ಯತಿವರ [೪]

ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತ
ಮೋದ ತೀರ್ಥರ ಸೇವೆಗೈದೂ |
ಹಾದಿ ಚರಿಸುತ ಸಾಂಗ್ಲಿ ಕ್ಷೇತ್ರದಿ
ಆದರದಿ ವೃಂದಾವನವ ಪೊಕ್ಕು
ನಾದ ಗುರು ಗೋವಿಂದ ವಿಠ್ಠಲನ
ಮೋದ ಧ್ಯಾನಾಸಕ್ತ ಗುರುವರ [೫]


Siri satyavrata sura taruve nimmaya pAda
varaSata patrakke aBinamipE [pa]

parama durmata dvAMta BAskaravara
suj~jAnAkAMkShi yAgihe
nirata SrImadAnaMda tIrthara vara
suBAShyAmRutava nuNisO [a.pa]

pogaLalennaLave nimmagaNita mahimeya
janadi viKyAtare guruvE |
suguNitava Baktarge kADuva vigaDa
apasmAra kuShThavu
migilu rOgAdigaLa kaLeyuta
bage bageyiMdali stutyarAgiha [1]

saritu pravahadi eraDeraDu sutargaLa
haraNa pOgalu KEdadI |
vara dvijanu raGunAthAKya
Baktili Siri satyavrataranu sEvegaiyyalu
aritu saMtAnAShTa kaMgaLa
tvarita karuNisi poreda guruvara [2]

Sirisatya saMdharI vRuMdAvanada baLi
SirimanyAyAsudhe paThisE |
guruvararu saMtuShTa paDutali
Sirava tUgalu aMtaraMgadi
vara suvRuMdAvanavu tannaya Sirava
tUguta tOritacCari [3]

vAdi BaharyakSha mEdhAvi
viBudhEDya sudhApivRuti kartAra |
mEdhiniya saMcarisi durvAdigaLa
balu KaMDisuta
BOdhisuta tatvagaLa sujanake hAdi
mOkShake tOrda yativara [4]

vEdavidyAKya satkarajareMdenisutta
mOda tIrthara sEvegaidU |
hAdi carisuta sAMgli kShEtradi
Adaradi vRuMdAvanava pokku
nAda guru gOviMda viThThalana
mOda dhyAnAsakta guruvara [5]

Leave a Reply

Your email address will not be published. Required fields are marked *

You might also like

error: Content is protected !!