Composer : Shri Shyamasundara dasaru
ಸಾಗಿ ಬಾರೋ ಗುರುರಾಘವೇಂದ್ರರಾಯ |
ವರ ಸತ್ಕವಿಗೇಯ [ಪ]
ಕೂಗುತ ಕರೆಯುವ ಭಾಗವತರ
ಮೊರೆಯ ಲಾಲಿಸು ಮುನಿವರ್ಯ [ಅ.ಪ]
ಪಾವನಘನ ವೃಂದಾವನ ಮಂದಿರನೆ
ಸದ್ಗುಣ ಬಂಧುರನೇ
ಪಾವಮಾನಿಮತ ಶರಧಿಗೆ ಚಂದಿರನೇ
ಧರಸಮ ಕಂದರನೇ
ಛಾವಣಿಪುರ ಸುಜನಾವಳಿ ಕೋರಿಕೆಯ
ಗರೆಯಲು ಶುಭಕಾಯ [೧]
ಶರಣಜನರು ಮೈಮರೆದು ಕರೆಯಲಾಗಿ
ನಿಲ್ಲದೆ ವರಯೋಗಿ |
ಭರದಿ ಬಂದು ಕರ ಪಿಡಿಯುವ
ಧೊರೆ ನೀನು ಎಂದರೀತೆವು ಸುರಧೇನು
ಕರುಣಾಕರ ಗತಿದಾಯಕ ನೀನೆಂದು
ಭಜಿಪೆವು ದಯಾಸಿಂಧು [೨]
ಶ್ಯಾಮಸುಂದರನ ಪ್ರೇಮವ ಪಡೆದಾತ
ಜಗದೊಳು ಪ್ರಖ್ಯಾತ
ನೇಮದಿ ಭಜಿಪರ ಕಾಮಿತ ಕೊಡುವಾತ
ದೈಶಿಕ ಕುಲನಾಥ
ಹೇಮಶಯ್ಯ ಸುಕುಮಾರ ಮಮತೆಯಿಂದ
ಮಂತ್ರಾಲಯದಿಂದ [೩]
sAgi bArO gururAGavEMdrarAya |
vara satkavigEya [pa]
kUguta kareyuva BAgavatara
moreya lAlisu munivarya [a.pa]
pAvanaGana vRuMdAvana maMdirane
sadguNa baMdhuranE
pAvamAnimata Saradhige caMdiranE
dharasama kaMdaranE
CAvaNipura sujanAvaLi kOrikeya
gareyalu SuBakAya [1]
SaraNajanaru maimaredu kareyalAgi
nillade varayOgi |
Baradi baMdu kara piDiyuva
dhore nInu eMdarItevu suradhEnu
karuNAkara gatidAyaka nIneMdu
Bajipevu dayAsiMdhu [2]
SyAmasuMdarana prEmava paDedAta
jagadoLu praKyAta
nEmadi Bajipara kAmita koDuvAta
daiSika kulanAtha
hEmaSayya sukumAra mamateyiMda
maMtrAlayadiMda [3]
Leave a Reply