Composer : Shri Jagannatha dasaru
ಪೊಂದಿ ಬದುಕಿರೊ ರಾಘವೇಂದ್ರ ರಾಯರ || ಪ ||
ಕುಂದದೆಮ್ಮನು ಕರುಣದಿಂದ ಪೊರೆವರ || ಅ ||
ನಂಬಿ ತುತಿಸುವ ಜನರ ಎಲ್ಲ ಇಷ್ಟವ
ತುಂಬಿ ಕೊಡುವನು ಅನ್ಯರ್ಹಂಬಲೀಯದೆ || ೧ ||
ಅಲವಬೋಧರ ಸುಮತ ಜಲಧಿಚಂದಿರ
ಗೆಲಿದು ಭಕ್ತರ ಕಾಯ್ವ ಸುಲಭ ಸುಂದರ || ೨ ||
ಗುರುಸುಧೀಂದ್ರರ -ವಿಮಲ ಕರಜರೆನಿಪರ
ಸ್ಮರಿಸಿ ಸುರುಚಿರ ವಿಮಲಚರಣ ಪುಷ್ಕರ || ೩ ||
ಫಾಲಲೋಚನ ವಿನುತ ಮೂಲರಾಮನ
ಶೀಲ ಸದ್ಗುಣ ನೆನೆವ ಶೀಲನನುದಿನ || ೪ ||
ಭೂತ ಭಾವನ ಜಗನ್ನಾಥ ವಿಠಲನ
ಪ್ರೀತಿಪಾತ್ರನ ನಂಬಿರೀತನೀಕ್ಷಣ || ೫ ||
poMdi badukiro – rAGavEMdra rAyara || pa ||
kuMdademmanu – karuNadiMda porevara || a ||
naMbi tutisuva – janara ella iShTava
tuMbi koDuvanu – anyarhaMbalIyade || 1 ||
alavabOdhara – sumata jaladhicaMdira
gelidu Baktara – kAyva sulaBa suMdara || 2 ||
gurusudhIMdrara -vimala karajarenipara
smarisi surucira – vimalacaraNa puShkara || 3 ||
PAlalOcana – vinuta mUlarAmana
SIla sadguNa neneva sheelananudina || 4 ||
BUta BAvana – jagannAtha viThalana
prItipAtrana – naMbirItaneekShaNa || 5 ||
Leave a Reply