Composer : Shri Harapanahalli Bheemmavva
ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ
ಬೇಡಿದ ಇಷ್ಟವರ ನೀಡುವರು ನಮ್ಮ ಯತಿವರ |ಪ|
ಮಂತ್ರಾಲಯದಿ ನಿಂತಿಹ ಚಿಂತೆಗಳ ಪರಿಹರಿಸುವ
ಕಂತು ಪಿತನನಂತಗುಣ ತನ್ನಂತರಂಗದಿ ಸ್ತುತಿಸುವ |
ಇಂಥ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಡು
ಮಂತ್ರಾಕ್ಷತೆ ಫಲ ನೀಡಿ ತಾ ಸಂತಾನ ಸಂಪತ್ತು ಕೊಡುವರ [೧]
ಭೂತ ಪ್ರೇತ ಭಯಗಳ ವಾತಪಿತ್ತ ವ್ಯಾಧಿಗಳ
ಶ್ವೇತ ಕುಷ್ಠ ರೋಗಿಗಳ ಪಾತಕಿಯರ ಪಾಪಗಳ |
ಪ್ರೀತಿಯಿಂದ ಕಳೆವರ ಪ್ರಖ್ಯಾತರಾಗಿ ಬೆಳೆವರ
ಭೂತಳದಿ ಸನ್ನಿಹಿತರಾಗಿ ಸೀತಾಪತಿ ನಿಜ ದಾಸರೆನಿಪರ [೨]
ಭಜಿಸೆ ಭಕ್ತರ ನೋಡುವ ಸದನಕೆ ಬಂದು ಕೂಡುವ
ಒದಗಿದಪತ್ತು ದೂಡುವ ಮುದದಿ ತಾ ದಯಮಾಡುವ |
ಅಜನಯ್ಯನ ಕೊಂಡಾಡುತ ತುಂಗಾನದಿಯ ತೀರ ವಾಸವಾಗಿ
ಹೃದಯದೊಳು ಭೀಮೇಶ ಕೃಷ್ಣನ ಪದವ ಭಜಿಸಿ ಪಡೆವರಾನಂದವ [೩]
nODiri rAGavEMdrara mADiri namaskAra
bEDida iShTavara nIDuvaru namma yativara |pa|
maMtrAlayadi niMtiha ciMtegaLa pariharisuva
kaMtu pitananaMtaguNa tannaMtaraMgadi stutisuva |
iMtha yatigaLa kANe hariyEkAMta BaktarenisikoMDu
maMtrAkShate Pala nIDi tA saMtAna saMpattu koDuvara [1]
BUta prEta BayagaLa vAtapitta vyAdhigaLa
SvEta kuShTha rOgigaLa pAtakiyara pApagaLa |
prItiyiMda kaLevara praKyAtarAgi beLevara
BUtaLadi sannihitarAgi sItApati nija dAsarenipara [2]
Bajise bhaktara nODuva sadanake baMdu kUDuva
odagidapattu dUDuva mudadi tA dayamADuva |
ajanayyana koMDADuta tuMgAnadiya tIra vAsavAgi
hRudayadoLu BImEsha kRuShNana padava Bajisi paDevarAnaMdava [3]
Leave a Reply