Composer : Shri Gurujagannatha dasaru
ನಂಬಿ ತುತಿಸಿರೋ ರಾಘವೇಂದ್ರ ಧೊರೆಯ ಸನ್ಮುನಿ ಕುಲವರ್ಯ || ಪ ||
ಅಂಬುಜನಾಭನಿಗತಿ ಪ್ರೀಯ ಸಜ್ಜನರಿಗೆ ಸಹಾಯ್ಯ || ಅ ||
ಕನಕಶಯ್ಯನಾ ತನುಜನಾಗಿ ಜನಿಸಿ ನರಹರಿಯನು ಒಲಿಸಿ
ಅನುಜರಿಗನುದಿನ ತತ್ತ್ವವ ತಾ ಕಲಿಸಿ ಪರಮತವನು ಜಯಿಸಿ
ಮನದಲಿ ಶ್ರೀ ಹರಿ ಪದವನ್ನೇ ಭಜಿಸಿ ವರಕರುಣವ ಸಲಿಸಿ
ವನಜಭವಾಂಡದಿ ಬಹು ಬಲ್ಲಿದನೆನಿಪ ನತಜನರಿಗೆ ಸುರಪ || ೧ ||
ಕಾಮಧೇನು ಸುರತರುವಿಗೆ ಸಮನೀತ ಕಾಮಿತ ಫಲದಾತ
ರಾಮ ನರಹರಿ ಕೃಷ್ಣರ ಪದದೂತ ಲೋಕದಿ ಬಹು ಖ್ಯಾತ
ಕಾಮಿನಿ ಸುತ ಧನ ಧಾನ್ಯದವ್ರಾತ ನೀಡುವೋ ನೀತ
ಪ್ರೇಮದಿ ನಿಜಜನಸ್ತೋಮಕೆ ಬಹುದಾತ ಯತಿವರಕುಲನಾಥ || ೨ ||
ಪಾತಕವನಕುಲ ವೀತಿಹೋತ್ರನೆನಿಸೀ ಸುಖವನು ಸುರಿಸಿ
ಭೂತಪ್ರೇತ ಮಹಭೀತಿಯ ಬಿಡಿಸಿ ರೋಗವ ಪರಿಹರಿಸಿ
ಮಾತಪಿತರ ತೆರ ದೂತರ ರಕ್ಷಿಸಿ ಮನೋಚಿಂತನೆಯ ಬಿಡಿಸಿ
ದಾತ ಗುರು ಜಗನ್ನಾಥ ವಿಠ್ಠಲನ ಪದದೂತ ನಿಜಜನರಿಗೆ ತಾತ || ೩ ||
naMbi tutisirO rAGavEMdra dhoreya sanmuni kulavarya || pa ||
aMbujanABanigati prIya sajjanarige sahAyya || a ||
kanakaSayyanA tanujanAgi janisi – narahariyanu olisi
anujariganudina tattvava tA kalisi paramatavanu jayisi
manadali SrI hari padavannE Bajisi varakaruNava salisi
vanajaBavAMDadi bahu ballidanenipa – natajanarige surapa || 1 ||
kAmadhEnu surataruvige samanIta kAmita PaladAta
rAma narahari kRuShNara padadUta lOkadi bahu KyAta
kAmini suta dhana dhAnyadavrAta nIDuvO nIta
prEmadi nijajanastOmake bahudAta yativarakulanAtha || 2 ||
pAtakavanakula vItihOtranenisI suKavanu surisi
BUtaprEta mahaBItiya biDisi rOgava pariharisi
mAtapitara tera dUtara rakShisi manOciMtaneya biDisi
dAta guru jagannAtha viThThalana padadUta – nijajanarige tAta || 3 ||
Leave a Reply