Namada ghanate

Composer : Shri Gurugopala vittala

By Smt.Shubhalakshmi Rao

ನಾಮದಾ ಘನತೆ ನಿಮಗೆ ಸಲ್ಲೋದೇ |
ಶ್ರೀಮಂತ ರಾಘವೇಂದ್ರಸ್ವಾಮಿ ಎಂತೆಂಬ [ಪ]

ಅಳವಬೋಧರ ಭಾಷ್ಯಾ೦ಬುಧಿಗೆ ಟೀಕೆಗಳೆಂಬ |
ಲಲಿತ ಸೇತುವೆಗಟ್ಟಿ ಹರಿದಾಸರ |
ಸುಲಭದಿಂದೈದಿಸಿ ದಶಕರಣಗಳ ಜೈಸಿ |
ಒಲಿಸಿ ಸವಿದೆ ವಿಷ್ಣು ಜ್ಞಾನ ಪ್ರಕೃತಿಯನು [೧ ]

ಹಲವು ದುರ್ಮತ ವಾದಿಗಳೆನೆಂಬಾದ್ರಿಗಳ |
ಕುಲಿಶದಿಂದ ವರಪಕ್ಷ ಭೇದಿಸಿ |
ಅಳವಬೋಧರ ಮತ ಅಮರಾವತಿಯಲಿ | ನಿ |
ಶ್ಚಲ ಸಾಮ್ರಾಜ್ಯವನಾಳ್ದೆ – ಕವಿಗಳ ಪೊರೆದೆ [೨ ]

ಭಾಸುರ ಸಚ್ಚಾಸ್ತ್ರ ವದನದಿ ಒಪ್ಪುತ |
ಪೂಶರ ಜಯ ಶಕ್ತಿಯನೆ ಧರಿಸಿದೆ |
ವಾಸವ ಸಖ ಗುರುಗೋಪಾಲವಿಠಲನ ದಾಸ |
ಶ್ರೀ ಸುಧೀಂದ್ರ ಕುಮಾರ ಸ್ವಾಮಿ ರಾಘವೇಂದ್ರ [೩]


nAmadA Ganate nimage sallOdE |
SrImaMta rAGavEMdrasvAmi eMteMba [pa]

aLavabOdhara BAShyA0budhige TIkegaLeMba |
lalita sEtuvegaTTi haridAsara |
sulaBadiMdaidisi daSakaraNagaLa jaisi |
olisi savide viShNu j~jAna prakRutiyanu [1 ]

halavu durmata vAdigaLeneMbAdrigaLa |
kuliSadiMda varapakSha BEdisi |
aLavabOdhara mata amarAvatiyali | ni |
Scala sAmrAjyavanALde – kavigaLa porede [2 ]

BAsura saccAstra vadanadi opputa |
pUSara jaya Saktiyane dhariside |
vAsava saKa gurugOpAlaviThalana dAsa |
SrI sudhIMdra kumAra svAmi rAGavEMdra [3]

Leave a Reply

Your email address will not be published. Required fields are marked *

You might also like

error: Content is protected !!