Guru Raghavendrare nimma

Composer : Shri Gopaladasaru

By Smt.Shubhalakshmi Rao

ಗುರು ರಾಘವೇಂದ್ರರೇ ! ನಿಮ್ಮ ನಿಜಕರುಣದಿ ಸಂಚರಿಪ
ಸುಜನರಿಗೆ ದುರುಳರಿಂ ಮಾಡಲ್ಪಟ್ಟ ದುಷ್ಕೃತಗಳೆಲ್ಲ ಮುಂದೋಡದೆ ಹಿಂಜರಿದು ಓಡುವವು ನಾ ಬಲ್ಲೆ ?

ಗುರು ರಾಘವೇಂದ್ರರೇ ! ಅಸ್ತ್ರಗಳೆಲ್ಲ ಒಂದಾಗಿ ಕೂಡಿ ಇಂದ್ರನ ವಜ್ರಾಯುದವನೆದುರಿಸ ಬಲ್ಲವೆ ?

ಗುರು ರಾಘವೇಂದ್ರರೇ ! ಪಕ್ಷಿಗಳೆಲ್ಲ ಒಂದಾಗಿ ಕೂಡಿ ಖಗಪತಿಯನೆದುರಿಸ ಬಲ್ಲವೆ ?

ಗುರು ರಾಘವೇಂದ್ರರೇ ! ಕ್ಷುದ್ರ ಮೃಗಗಳೆಲ್ಲ ಒಂದಾಗಿ ಕೂಡಿ ಸಿಂಹಗೆ ಉಪದ್ರವ ಕೊಡಬಲ್ಲವೆ ?

ಗುರು ರಾಘವೇಂದ್ರರೇ ! ನಿಮ್ಮ ಭದ್ರವಾದ ಕರುಣಾ ಅಭಯ ಛತ್ರದೊಳು ನಾನಿರಲು ನಿದ್ರೆಯಲ್ಲಿಯೂ ಬೀತಿ ಎನಗಿಲ್ಲ ಗೋಪಾಲವಿಠಲನಾಣೆ !


guru rAGavEMdrarE ! nimma nijakaruNadi saMcaripa
sujanarige duruLariM mADalpaTTa duShkRutagaLella muMdODade hiMjaridu ODuvavu nA balle ?

guru rAGavEMdrarE ! astragaLella oMdAgi kUDi iMdrana vajrAyudavanedurisa ballave ?

guru rAGavEMdrarE ! pakShigaLella oMdAgi kUDi Kagapatiyanedurisa ballave ?

guru rAGavEMdrarE ! kShudra mRugagaLella oMdAgi kUDi siMhage upadrava koDaballave ?

guru rAGavEMdrarE ! nimma BadravAda karuNA aBaya CatradoLu nAniralu nidreyalliyU bIti enagilla gOpAlaviThalanANe !

Leave a Reply

Your email address will not be published. Required fields are marked *

You might also like

error: Content is protected !!