Alpa manavarigalparisa

Composer : Shri Gurujagannatha dasaru

By Smt.Shubhalakshmi Rao

ಅಲ್ಪ ಮಾನವರಿಗಾಲ್ಪರಿಸ ಬ್ಯಾಡೆಲೊ ಗುರುವೆ || ಪ ||

ಕಲ್ಪ ಕಲ್ಪದಲಿ ಅಹಿತಲ್ಪ ಹರಿಯ | ಸಂ |
ಕಲ್ಪವನನುಸರಿಸಿ ನಡೆವೊ ಸ್ವಮಿ |
ಕಲ್ಪತರು ನೀನೆಂದು ಮನದಲಿ ಸಂಕಲ್ಪವಾದರು | ವಿ |
ಕಲ್ಪನಾಗದವನ ಅಸ್ಮದ್ ಗುರುವೆ || ೧ ||

ನಿನ್ನ ಧ್ಯಾನವಗೈದು ನಿನ್ನ ಸೇವೆಯನು ಮಾಡಿ |
ನಿನ್ನ ಪಾದ ಪದುಮವಾಶ್ರಯವ ಮಾಡಿ |
ಮನದಲಿ ಭಜಿಸುತ ನನ್ಯಶರನನು ಯೆನಿಸಿ |
ಅನ್ಯ ಜನರನು ಯಾಚಿಸದಿಪ್ಪ ನರನ || ೨||

ನಿನ್ನ ಧ್ಯಾನವ ಬಿಟ್ಟು ನಿನ್ನ ಧ್ಯಾನವ ತ್ಯಜಿಸಿ |
ನಿನ್ನ ನಾಮ ಸ್ಮರಣೆ ಮಾಡದೆ |
ಅನ್ಯ ದೇವರ ಸೇವೆ ಮನ್ನ ಪೂರ್ವಕ ಮಾಡಿ |
ಬನ್ನ ಬಡುತಿಹ್ಯಾರೊ ಭವದೊಳಗೆ ಇನ್ಥ || ೩ ||

ಮಧ್ವ ಮತದಲಿ ಪುಟ್ಟಿ ಮಧ್ವ ಶಾಸ್ತ್ರವ ಬಿಟ್ಟು |
ಮಧ್ವ ಮತವನು ಪೊಂದದೆ |
ಮಧ್ವ ದ್ವೇಶವ ಬೆಳೆಸಿ |
ಮಧ್ವ ದ್ರೋಹವ ಪಡೆದಿರುವಂಥ || ೪ ||

ನಾಥ ನಿನ್ನಯ ಪಾದ ಪಾಥೊಜ ಯುಗವನು |
ಪ್ರೀತಿ ಪೂರ್ವಕ ಭಜಿಪ ಜನರ |
ಯೂಥದೊಲಗಿನ್ನಿಟ್ಟು ಪೊರೆಯೋ ನೀ |
ದಾತ ಗುರು ಜಗನ್ನಾಥವಿಠ್ಠಲಗತಿ ಪ್ರೀಯ || ೫ ||


alpa mAnavarigAlparisa byADelo guruve || pa ||

kalpa kalpadali ahitalpa hariya | saM |
kalpavananusarisi naDevo svami |
kalpataru nIneMdu manadali saMkalpavAdaru | vi |
kalpanAgadavana asmad guruve || 1 ||

ninna dhyAnavagaidu ninna sEveyanu mADi |
ninna pAda padumavAshrayava mADi |
manadali Bajisuta nanyasharananu yenisi |
anya janaranu yAcisadippa narana || 2||

ninna dhyAnava biTTu ninna dhyAnava tyajisi |
ninna nAma smaraNe mADade |
anya dEvara sEve manna pUrvaka mADi |
banna baDutihyAro bhavadoLage intha || 3 ||

madhva matadali puTTi madhva shAstrava biTTu |
madhva matavanu poMdade |
madhva dvEshava beLesi |
madhva drOhava paDediruvaMtha || 4 ||

nAtha ninnaya pAda pAthoja yugavanu |
prIti pUrvaka Bajipa janara |
yUthadolaginniTTu poreyO nI |
dAta guru jagannAthaviThThalagati prIya || 5 ||

Leave a Reply

Your email address will not be published. Required fields are marked *

You might also like

error: Content is protected !!