Yake mookanadyo guru

Composer : Shri Jagannatha dasaru

By Smt.Shubhalakshmi Rao

ಯಾಕೆ ಮೂಕನಾದ್ಯೋ ಗುರು ನೀ ಯಾಕೆ ಮೂಕನಾದ್ಯೋ |
ಯಾಕೆ ಮೂಕನಾದೆ ಲೋಕಪಾಲಕ ಎನ್ನ |
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ |ಅ.ಪ|

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ |
ಮಂದಿಯೊಳಗೆ ಎನ್ನ ಮಂದನ್ನ ಮಾಡೀಗ || ೧ ||

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ |
ಕಾಕುಜನರೊಳೆನ್ನ ನೂಕಿಬಿಟ್ಟು ಈಗ || ೨ ||

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ |
ಘನ್ನಮಹಿಮನು ನೀ ಎನ್ನನು ಬಿಟ್ಟೀಗ || ೩ ||

ಜನನಿಯು ನೀನೆ ಎನಗೆ ಎನ್ನ ಜನಕನಯ್ಯ |
ಮನ್ನಿಸೊ ನೀ ನಿತ್ಯ ಅನನ್ಯ ಶರಣ್ಯ || ೪ ||

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೆ |
ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರ್ಯಾರೋ || ೫ ||

ನಾಥನು ನೀನಯ್ಯ ಅನಾಥನು ನಾನಯ್ಯ |
ನಾಥೋಜ ಗುರುಜಗನ್ನಾಥ ವಿಠ್ಠಲಪ್ರಿಯ || ೭ ||

[ಪಾತಕರರಿ ಜಗನ್ನಾಥ ವಿಠ್ಠಲಪ್ರಿಯ]


yAke mUkanAdyO guru nI yAke mUkanAdyO |
yAke mUkanAde lOkapAlaka enna |
sAkuvaryArayya SrIkara rAGavEMdra |a.pa|

hiMdakke nI enna muMde suLidADide |
maMdiyoLage enna maMdanna mADIga || 1 ||

bEkAgadiddarinyAke kaiyanu piDide |
kAkujanaroLenna nUkibiTTu eega || 2 ||

ninnaMtha karuNilla ennaMtha kRupaNilla |
Gannamahimanu nI ennanu biTTIga || 3 ||

jananiyu nIne enage enna janakanayya |
manniso nI nitya ananya SaraNya || 4 ||

eMdigAdaru ninna poMdikoMDavanalle |
iMdu nI biTTarenna muMde kAyuvaryArO || 5 ||

nAthanu nInayya anAthanu nAnayya |
nAthOja gurujagannAtha viThThalapriya || 7 ||

[pAtakarari jagannAtha viThThalapriya]

Leave a Reply

Your email address will not be published. Required fields are marked *

You might also like

error: Content is protected !!