Vara mantralayadolu

Composer : Shri Vishwendra Tirtharu

By Smt.Shubhalakshmi Rao

ವರ ಮಂತ್ರಾಲಯದೊಳು ಘನವಾಗಿ ನೆಲಸಿರ್ಪ |
ಪರಮ ಸದ್ಗುರುವರ್ಯ ಶ್ರೀರಾಘವೇಂದ್ರ ||ಪ||

ಭುವನಾದ್ರಿಯೋಳಗುದುಭವಿಸುತ್ತ ರವಿಯಂತೆ |
ತವಕದಿಂ ದಿನದಿನವು ತೇಜವನು ಬೆಳಗುವೆ ||೧||

ನರನಂತೆ ಮೆರೆಯುವ ಜಯಮುನಿಕೃತ ಶಾಸ್ತ್ರ |
ಪರಿಮಳವನು ನೀನು ಪಸರಿಸಿದೆಯಲ್ಲವೆ ||೨||

ಮಧ್ವಮತವೆಂಬ ದುಗ್ಧ ಸಾಗರದೊಳು |
ಉದ್ಭವಿಸಿದ ಪೂರ್ಣಹಿಮಕರ ತೇಜ ||೩||

ಅಸುರ ನಂದನನಾಗಿ ನರಹರಿಯನೆ ಕಂಡ |
ವ್ಯಾಸರಿವರು ಸಿರಿಗುರು ರಾಘವೇಂದ್ರ ||೪||

ರಾಜೇಶ ಹಯಮುಖ ಭಜಕರೊಳಗೆ ನೀನು |
ರಾಜಿಪ ಸುರತರುವಂತಿರ್ಪೆ ಗುರುವೆ ||೫||


vara maMtrAlayadoLu GanavAgi nelasirpa |
parama sadguruvarya SrIrAGavEMdra ||pa||

BuvanAdriyOLaguduBavisutta raviyaMte |
tavakadiM dinadinavu tEjavanu beLaguve ||1||

naranaMte mereyuva jayamunikRuta SAstra |
parimaLavanu nInu pasarisideyallave ||2||

madhvamataveMba dugdha sAgaradoLu |
udBavisida pUrNahimakara tEja ||3||

asura naMdananAgi narahariyane kaMDa |
vyAsarivaru siriguru rAGavEMdra ||4||

rAjESa hayamuKa BajakaroLage nInu |
rAjipa surataruvaMtirpe guruve ||5||

Leave a Reply

Your email address will not be published. Required fields are marked *

You might also like

error: Content is protected !!