Composer : Shri Gurupranesha vittala
ತಂಗಿ ಕೇಳಿದ್ಯಾ ರಾಘವೇಂದ್ರ-
ಅಘಂಗಳ ಕಳೆದು ಸುಖಂಗಳ ಕೊಡುವದು [ಪ]
ಶ್ರೀಪೂರ್ಣಭೋಧರ ಮತಾಪಯೋಬ್ಧಿಗೆ ಚಂದ್ರ
ತಾಪಸೋತ್ತಮರ ದಿವ್ಯಾಪಾರ ಮಹಿಮೆಯ | ೧ |
ಅಂಗ ಹೀನರಿಗೆ ದಿವ್ಯಾಂಗ ಕೊಟ್ಟರೆಂದು
ಸಂಗೀತ ಮುಖದಿ ಜನಂಗಳು ಪಾಡುವುದು | ೨ |
ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದು
ಸುವಿವೇಕ ಮನದಿಂದ ಕವಿಜನ ಪಾಡುವುದು | ೩ |
ವಂಧ್ಯ ಸ್ತ್ರೀಯರು ಬಂದು ನಿಂದು ಆರಾಧಿಸೆ
ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ | ೪ |
ಗುರುಪ್ರಾಣೇಶವಿಠ್ಠಲ ಸರ್ವ ಕಾಮಿತಾರ್ಥವ
ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ | ೫ |
taMgi kELidyA rAGavEMdra-
aGaMgaLa kaLedu suKaMgaLa koDuvadu [pa]
SrIpUrNaBOdhara matApayObdhige caMdra
tApasOttamara divyApAra mahimeya | 1 |
aMga hInarige divyAMga koTTareMdu
saMgIta muKadi janaMgaLu pADuvudu | 2 |
kiviyilladavarige tavakAdi koTTareMdu
suvivEka manadiMda kavijana pADuvudu | 3 |
vaMdhya strIyaru baMdu niMdu ArAdhise
saMdEhavilla bahu maMdi makkaLa koTTa | 4 |
guruprANESaviThThala sarva kAmitArthava
guru rAGavEMdraralli nirutadi koDisuva | 5 |
Leave a Reply