Composer : Shri Prasannavenkata dasaru
ರಾಘವೇಂದ್ರ ಮುನಿರಾಯರ ಸ್ಮರಣೆ |
ಜಾಗಿಲ್ಲದೆ ಮಾಡಿ ನೀಗೊ ಭವಣೆ [ಪ]
ಹಿಂದಿನ ಮೂರು ಜನುಮಗಳಲ್ಲೂ |
ಇಂದಿರೇಶನನು ಒಲಿಸಿ ಮೆರೆದು ಬಲು
ಕುಂದಿಲ್ಲದ ಪುಣ್ಯಗಳಿಸಿ ಸುರತರು |
ಮಂದ ಭಾಗ್ಯರಿಗೆ ಹಂಚುತಲಿಹರು [೧]
ಭೂತಪ್ರೇತ ಸಕಲಾದಿ – ಶಕುನಭಯ |
ಘಾತಚಕ್ರ ಜಾತಕದ ಪೀಡೆಗಳು ||
ಗತಿಸುವವೀಯತಿ ಕರುಣೆ ತೋರಲು |
ನಿತ್ಯತುತಿಸೆ ನಿಜ ಮುಕುತಿ ನಿಶ್ಚಿತವು [೨]
ಕಲಿಬಲ ಹೆಚ್ಚಿ ನಲುಗಿದ ಜನಕೆ |
ಸುಲಭದ ದಾರಿಲಿ ನಿಲ್ಲಿಸಿ |
ನಳಿಲನನಾಭ ಪ್ರಸನ್ವೆಂಕಟನಾಜ್ಞೆಲಿ |
ಸುಲಲಿತ ಮಹಿಮೆಗಳ ತೋರಿ ಮೆರೆಯುತಿಹ [೩]
rAGavEMdra munirAyara smaraNe |
jAgillade mADi nIgo BavaNe [pa]
hiMdina mUru janumagaLallU |
iMdirESananu olisi meredu balu
kuMdillada puNyagaLisi surataru |
maMda BAgyarige haMcutaliharu [1]
BUtaprEta – sakalAdi – SakunaBaya |
GAtacakra – jAtakada pIDegaLu ||
gatisuvavIyati karuNe tOralu |
nityatutise nija mukuti niScitavu [2]
kalibala hecci nalugida janake |
sulaBada dArili nillisi |
naLilananABa prasanveMkaTanAj~jeli |
sulalita mahimegaLa tOri mereyutiha [3]
Leave a Reply