Nodide naneega

Composer : Shri Krishna Vittala

By Smt.Shubhalakshmi Rao

ನೋಡಿದೆ ನಾನೀಗ ಗುರುರಾಜನ ಬೇಗ [ಪ]
ನೋಡಿ ಕೊಂಡಾಡಿ ಪಾಡಿ ಬೇಡುವೆನೀಗ [ಅ.ಪ]

ಕರದೊಳು ದಂಡ ಕಮಂಡಲು ಪಿಡಿದಿಹ
ಕೊರಳೊಳು ತುಳಸಿ ಹಾರವ ಧರಿಸಿಹ
ನರರ ಸೇವೆಯಕೊಳ್ವ ನರಹರಿಪ್ರೀಯನ
ಕರುಣಾಸಾಗರ ನಮ್ಮ ಗುರು ರಾಘವೇಂದ್ರನ [೧]

ಕಲಿಕಲ್ಮಷದೂರ ಕುಜನಕುಠಾರನ
ಸುಲಲಿತ ಕರುಣಾಬ್ಧಿ ಬುಧ ಜನವಂದ್ಯನ
ಒಲಿದು ಭಕ್ತರ ಕಾಯ್ವ ಕಾರುಣ್ಯಶೀಲನ
ಜಲಜನಾಭನ ಪಾದ ಭಜಿಪ ಗುರುರಾಜನ [೨]

ಕಾಮಿತಗಳನೀವ ವರಕಾಮಧೇನುವೆ
ನೇಮದಿಂ-ಭಜಿಪರ್ಗೆ ಚಿಂತಾಮಣಿಯೆನಿಪನ
ಕೋಮಲಾಂಗ ಸಿರಿಕೃಷ್ಣವಿಠಲನ ಪಾದ
ಪ್ರೆಮದಿಂ ಪೂಜಿಪ ಗುರು ರಾಘವೇಂದ್ರರ [೩]


nODide nAnIga gururAjana bEga [pa]
nODi koMDADi pADi bEDuvenIga [a.pa]

karadoLu daMDa kamaMDalu piDidiha
koraLoLu tuLasi hArava dharisiha
narara sEveyakoLva narahariprIyana
karuNAsAgara namma guru rAGavEMdrana [1]

kalikalmaShadUra kujanakuThArana
sulalita karuNAbdhi budha janavaMdyana
olidu Baktara kAyva kAruNyaSIlana
jalajanABana pAda Bajipa gururAjana [2]

kAmitagaLanIva varakAmadhEnuve
nEmadiM-Bajiparge ciMtAmaNiyenipana
kOmalAMga sirikRuShNaviThalana pAda
premadiM pUjipa guru rAGavEMdrara [3]

Leave a Reply

Your email address will not be published. Required fields are marked *

You might also like

error: Content is protected !!