Nodale manave

Composer : Shri Gurushrisha vittala dasaru

By Smt.Shubhalakshmi Rao

ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ ಈಡಿಲ್ಲವೊ ಪುಣ್ಯಕೆ || ಪ ||
ನಾಡೊಳಗೆ ಗುರುರಾಘವೇಂದ್ರ ರಾಯರ ಸೇವೆ ಮಾಡಿದವ ಪರಮ ಧನ್ಯ ಮಾನ್ಯ || ಅ ||

ನಿಷ್ಠೆಯಿಂದಲಿ ಭಜಿಸೆ ಕಷ್ಟಗಳು ದೂರ ಮನೋ ಭೀಷ್ಟೆಯನು ಪೂರೈಪರೋ
ಅಷ್ಟಸೌಭಾಗ್ಯವನೆ ಕೊಟ್ಟು ಸುಜನರಿಗೆ ಶ್ರೀ-ವಿಷ್ಣುದಾಸ್ಯವ ತೋರ್ಪರೋ
ದೃಷ್ಟಿಯಿಂದಲಿ ನೋಡೆ ಅನೇಕ ಜನ್ಮದ ಪಾಪ – ಬಿಟ್ಟು ಪೋಪವೊ ಕ್ಷಣದೊಳು
ಎಷ್ಟು ಹೇಳಲಿ ಇವರ ನಿಷ್ಠ ಮಹಾತ್ಮೆಯನು – ದುಷ್ಟರಿಗೆ ದೊರೆಯದಿವರ ಸೇವಾ || ೧ ||

ಹಲವು ತೀರ್ಥಗಳ್ಯಾಕೆ ಹಲವು ಕ್ಷೇತ್ರಗಳ್ಯಾಕೆ ಫಲ ಸುಲಭದಲ್ಲಿ ಇರಲು
ಬಲವು ಇದ್ದದ್ದರಲಿ ಪ್ರದಕ್ಷಿಣೆ ಸುಪದಜಲ ತಲೆಯಲ್ಲಿ ಧರಿಸೊ ನಿತ್ಯ
ಮಲರಹಿತನಾಗಿ ದಂಡ ಪ್ರಣಾಮವು ಮಾಡೆ ಒಲಿವ ಕರುಣದಲಿ ಬೇಗ
ಜಲಜನಾಭನು ನಾಲ್ಕು ರೂಪದಿಂದಿವರಲ್ಲಿ ಸಿಲುಕಿ ಪೂಜೆಯಗೊಂಬ ಸತತ ಮೋಕ್ಷದಾತಾ || ೨ ||

ಹರಿದಾಸರಿದ್ದ ಸ್ಥಳ ವರಕಾಶಿ ಮೊದಲಾದ ಕುರುಕ್ಷೇತ್ರಕಿಂತಧಿಕವೋ
ಸುರ ಋಷಿ ಮುನಿಗಳಲ್ಲಿರುತಿಹರು ವೈಕುಂಠ ಸರಿಮಿಗಿಲು ಎಂದೆನಿಪುದೋ
ಪರಮ ಸುಜ್ಞಾನಿಗಳಿಗೀ ಫಲವು ದೊರಕುವುದು ತಾರತಮ್ಯದಿ ಇತರ ಜನಕೆ
ಗುರುಶ್ರೀಶವಿಠ್ಠಲನು ಇವರ ರೂಪನಾಮದಲಿ ಪರಿಪರಿಯ ವರವಗರೆವಾ ಪೊರೆವಾ || ೩ ||


nODele manave koMDADu gurugaLa pAda IDillavo puNyake || pa ||
nADoLage gururAGavEMdra rAyara sEve mADidava parama dhanya – mAnya || a ||

niShTheyiMdali bhajise kaShTagaLu dUra manO BIShTeyanu pUraiparO
aShTasauBAgyavane koTTu sujanarige SrI-viShNudAsyava tOrparO
dRuShTiyiMdali nODe anEka janmada pApa – biTTu pOpavo kShaNadoLu
eShTu hELali ivara niShTha mahAtmeyanu – duShTarige doreyadivara sEvA || 1 ||

halavu tIrthagaLyAke halavu kShEtragaLyAke Pala sulaBadalli iralu
balavu iddaddarali pradakShiNe supadajala taleyalli dhariso nitya
malarahitanAgi daMDa praNAmavu mADe oliva karuNadali bEga
jalajanABanu nAlku rUpadiMdivaralli siluki pUjeyagoMba satata mOkShadAtA || 2 ||

haridAsaridda sthaLa varakASi modalAda kurukShEtrakiMtadhikavO
sura RuShi munigaLallirutiharu vaikuMTha sarimigilu eMdenipudO
parama suj~jAnigaLigI Palavu dorakuvudu tAratamyadi itara janake
guruSrISaviThThalanu ivara rUpanAmadali paripariya varavagarevA – porevA || 3 ||

Leave a Reply

Your email address will not be published. Required fields are marked *

You might also like

error: Content is protected !!