Composer : Shri Gurushyamasundara dasaru
ಕಂಡೆನಾ ಯತಿರಾಜನಾ
ಪುಂಡರೀಕಾಕ್ಷನ ಪಾದ ಭಜಕನಾ |ಪ|
ದಂಡ ಕಮಂಡಲ ಧರಿಸಿಹನಾ
ಉದ್ಧಂಡರ ವಾದದಿ ಗೆಲಿದಿಹನಾ |
ತಂಡತಂಡದಿ ಬರುವ ಭಕುತರನಾ
ಹಿಂಡು ಪಾಪವ ತರಿದು ಪೊರೆವನಾ [೧]
ಕಾಷಾಯ ವಸನ ವಿಭೂಷಣ
ವಿಶೇಷ ಮಹಿಮೆಯಿಂದ ಮೆರೆಯುವನಾ
ವಾಸುಕಿ ಶಯನನ ನಿಜದಾಸನಾ
ಭೂಷಿತ ಮಂತ್ರನಿಲಯ ನಾಥನಾ [೨]
ಕರಿವರದನ ದಿವ್ಯ ದಯವ ಪಡೆದನಾ
ವರತುಂಗತೀರಿ ರಾಜಿಪನಾ |
ಗುರು ಶ್ಯಾಮಸುಂದರನ ನಿಜವರ ಭಕ್ತನಾ
ಗುರುಸಾರ್ವಭೌಮನ ಪರಿಮಳಾರ್ಯನಾ [೩]
kaMDenA yatirAjanA
puMDarIkAkShana pAda BajakanA |pa|
daMDa kamaMDala dharisihanA
uddhaMDara vAdadi gelidihanA |
taMDataMDadi baruva BakutaranA
hiMDu pApava taridu porevanA [1]
kAShAya vasana viBUShaNa
viSESha mahimeyiMda mereyuvanA
vAsuki Sayanana nijadAsanA
BUShita maMtranilaya nAthanA [2]
karivaradana divya dayava paDedanA
varatuMgatIri rAjipanA |
guru SyAmasuMdarana nijavara BaktanA
gurusArvaBaumana parimaLAryanA [3]
Leave a Reply