Endu kambe guruve

Composer : Shri Vittalesha

By Smt.Shubhalakshmi Rao

ಎಂದು ಕಾಂಬೆ ಗುರುವೆ ದೊರೆಯೆ [ಪ]
ಎಂದು ಕಾಂಬೆ ನಿನ್ನ ಚಂದಿರ ಮುಖಸಿರಿ
ತಂದೆ ಶ್ರೀ ರಾಘವೇಂದ್ರ ಇಂದು ದಯವ ತೋರೊ [ಅ.ಪ]

ಘೋರ ಸಂಸಾರದಲ್ಲಿ ಜಾರಿ ಹೋಯಿತು ಕಾಲ
ಸಾರಿ ಕೇಳುವೆ ಸುಕುಮಾರ ಪ್ರಹ್ಲಾದ ನಿನ್ನ [೧]

ನಾನಾರೋಗಗಳಲ್ಲಿ ಕ್ಷೀಣವಾಯಿತು ದೇಹ
ಏನು ಸ್ಥಿರವೋ ತನು ಮೌನಿ ವ್ಯಾಸನೆ ನಿನ್ನ [೨]

ಕ್ಲೇಶ ಕಷ್ಟಗಳಲ್ಲಿ ಮಾಸಿ ಹೋಯಿತು ಬುದ್ಧಿ
ದೈಶಿಕ ವರ ವಿಠಲೇಶದಾಸನೆ ನಿನ್ನ [೩]


eMdu kAMbe guruve doreye [pa]
eMdu kAMbe ninna caMdira muKasiri
taMde SrI rAGavEMdra iMdu dayava tOro [a.pa]

GOra saMsAradalli jAri hOyitu kAla
sAri kELuve sukumAra prahlAda ninna [1]

nAnArOgagaLalli kShINavAyitu dEha
Enu sthiravO tanu mauni vyAsane ninna [2]

klESa kaShTagaLalli mAsi hOyitu buddhi
daiSika vara viThalESadAsane ninna [3]

Leave a Reply

Your email address will not be published. Required fields are marked *

You might also like

error: Content is protected !!