Composer : Shri Krishna Vittala
ಆವ ಗುರುಗಳಿಗುಂಟು ಈ ವೈಭವವು
ಪವನನೊಡೆಯನ ಭಕ್ತ ರಾಘವೇಂದ್ರರಿಗಲ್ಲದಲೆ [ಪ]
ವರ ತುಂಗಾತೀರದಲಿ ಮೆರೆವ ಮಂತ್ರಾಲಯದಿ
ತರಣಿಯಂದದಿ ಮೆರೆದು ಭಕ್ತರನು ಪೋಷಿಸುವ
ಶರಣ ರಕ್ಷಕನೆಂಬ ಬಿರುದಿಂದ ತಾ ಮೆರೆವ
ವರ ಮಧ್ವ ಕುಲಚಂದ್ರ ಗುರುರಾಜಗಲ್ಲದೇ [೧]
ಸಂತರೆಲ್ಲರು ಬಂದು ಶಾಂತಿಯಿಂದಲಿ ನಿಂದು
ಕಂತುಪಿತನ ಭಕ್ತ ಚಿಂತೆಯನ್ನು ಹರಿಸೆಂದು
ಸಂತತವು ಬೇಡುತಿಹ ಶಾಂತರಾಗಿಹ ಜನರ
ಸಂತೋಷದಲಿ ಕಾಯ್ವ ಗುರುರಾಜಗಲ್ಲದೇ [೨]
ಕಾವಿ ವಸ್ತ್ರವನು ಧರಿಸಿ ಕವಿದ ಭ್ರಮೆಯನು ಬಿಡಿಸಿ
ಭುವಿಜ ರಮಣನ ಭಜಿಪ ಕವಿಕುಲೋತ್ತಮ ನಮ್ಮ
ಸೇವಕರ ಸುರಧೇನು ಪಾವನಾತ್ಮನು ಆದ
ಕೃಷ್ಣವಿಠಲನ ಭಕ್ತ ಗುರುರಾಜಗಲ್ಲದೆ [೩]
Ava gurugaLiguMTu I vaiBavavu
pavananoDeyana Bakta rAGavEMdrarigalladale [pa]
vara tuMgAtIradali mereva maMtrAlayadi
taraNiyaMdadi meredu Baktaranu pOShisuva
SaraNa rakShakaneMba birudiMda tA mereva
vara madhva kulacaMdra gururAjagalladE [1]
saMtarellaru baMdu SAMtiyiMdali niMdu
kaMtupitana Bakta ciMteyannu hariseMdu
saMtatavu bEDutiha SAMtarAgiha janara
saMtOShadali kAyva gururAjagalladE [2]
kAvi vastravanu dharisi kavida Brameyanu biDisi
Buvija ramaNana Bajipa kavikulOttama namma
sEvakara suradhEnu pAvanAtmanu Ada
kRuShNaviThalana Bakta gururAjagallade [3]
Leave a Reply