Yogi kulavara mukuta

Composer : Shri Gopati Vittala dasaru

By Smt.Shubhalakshmi Rao

ಯೋಗಿ ಕುಲ ವರ ಮಕುಟ
ಶ್ರೀರಾಘವೇಂದ್ರರ ಭಜಿಸಿರೋ [ಪ]

ಮೋದತೀರ್ಥ ಪಯೋಧಿ ಚಂದಿರ
ಸಾಧುಜನ ಸತ್ಕುಮುದಕೇ
ಐದು ಆನನವಾಗಿಹನು
ದುರ್ವಾದಿ ಗಜ ಸಮುದಾಯಕೇ (೧)

ದೂಷಿಸುವ ಜನರುಗಳ ಗರ್ವ
ಅಶೇಷ ಪರಿಹಾರಗೈಸುವಾ
ದಾಸರಭಿಮಾನವನು ಬಿಡದಿಹ
ದೋಶ ವರ್ಜಿತನೆನಿಸುವಾ (೨)

ದಿನಪನಂದದಿ ಕಾಂತಿ
ಬೃಂದಾವನದೊಳಿದ್ದು ಪ್ರಕಾಶವಾ
ಅಣುಗರಿಗೆ ಸಂತೃಪ್ತಿ ಸುಖವನು
ಅನವರತ ಪೂರೈಸುವಾ (೩)

ವ್ಯಾಪ್ತರಾಗಿಹ ಅಖಿಳರಿಗೆ ಫಲ
ಪ್ರಾಪ್ತಿಗೋಸುಗ ಚರಿಸುವಾ
ಆಪ್ತರಿಲ್ಲದೆ ಈತನೇ ಯೆನಗ್
ಆಪ್ತನನುದಿನ ವಾಗುವಾ (೪)

ಕೋಲ ತನಯೆಯ ತೀರದಲಿ
ಹೊ-ನ್ನಾಳಿಯಲಿ ವಿಹರಿಸುವಾ
ಶೀಲ ಗೋಪತಿವಿಠ್ಠಲನ
ಕೃಪೆಗಾಲಯನು ಯೆಂದೆನಿಸುವಾ (೫)


yOgi kula vara makuTa
SrIrAGavEMdrara BajisirO [pa]

mOdatIrtha payOdhi caMdira
sAdhujana satkumudakE
aidu AnanavAgihanu
durvAdi gaja samudAyakE (1)

dUShisuva janarugaLa garva
aSESha parihAragaisuvA
dAsarabhimAnavanu biDadiha
dOsha varjitanenisuvA (2)

dinapanaMdadi kAMti
bRuMdAvanadoLiddu prakASavA
aNugarige saMtRupti suKavanu
anavarata pUraisuvA (3)

vyAptarAgiha aKiLarige Pala
prAptigOsuga carisuvA
Aptarillade ItanE yenag
Aptananudina vAguvA (4)

kOla tanayeya tIradali
ho-nnALiyali viharisuvA
SIla gOpativiThThalana
kRupegAlayanu yeMdenisuvA (5)

Leave a Reply

Your email address will not be published. Required fields are marked *

You might also like

error: Content is protected !!