Tappugalenisadennappa

Composer : Shri Gurupranesha vittala

By Smt.Shubhalakshmi Rao

ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು |
ಸರ್ಪ ಶಯನನ ದೂತಾ |
ಇಪ್ಪತ್ತು ವಂದು ಕುಭಾಷ್ಯ –
ಮುರಿದರಾ | ಮ |
ತ ಪ್ರವರ್ತಕ ರಾಘವೇಂದ್ರ –
ಮುನಿಪ ಮಹಾ [ಪ]

ಪ್ರತಿ ವರುಷಕೆ ಬಂದು |
ನುತಿಸಿ ಪೋಗು ಯೆಂದೆ |
ನುತ ಸ್ವಪ್ನದಲಿ ನೀ ಬಂದೂ ||
ಹಿತದಿಂದ ಪೇಳಲು |
ರತನಾಗಿ ಧನದಿ | ಮ |
ರೆತು ಬಿಟ್ಟೆ ನಿಮ್ಮನು |
ಯತಿ ಕುಲೋತ್ತಮ ಇಂಥಾ |೧|

ಸ್ನಾನ ಸಂಧ್ಯಾನ ಸುಜಪ |
ತಪ ವ್ರತ ಹೋಮ |
ಮೌನ ಮಾರ್ಗಗಳರಿಯೆ ||
ಜ್ಞಾನಿಗಳಾನು | ಸಂ |
ಧಾನ ಪೂರ್ವಕ ಪೂಜೆ |
ಯಾನು ಮಾಡದೆ ದುಷ್ಟ |
ಮಾನವರೊಳಗಿದ್ದ |೨|

ಏಸು ಜನ್ಮದಿ ಬಂದಾ |
ದೋಷವ ಕಳೆದು | ವಿ |
ಶೇಷ ಸುಖವ ಕೊಡುವಾ ||
ಈ ಸುವಾರ್ತಿಯ ಕೇಳಿ –
ಮೊರೆಹೊಕ್ಕ ಗುರುಪ್ರಾ |
ಣೇಶ ವಿಠ್ಠಲನ ದೂತಾ –
ಮತ್ಪ್ರೀತಾ |೩|


tappugaLeNisAdennappa kAyalibEku |
sarpa Sayanana dUtA |
ippattu vaMdu kuBAShya –
muridarA | ma |
ta pravartaka rAGavEMdra –
munipa mahA [pa]

prati varuShake baMdu |
nutisi pOgu yeMde |
nuta svapnadali nI baMdU ||
hitadiMda pELalu |
ratanAgi dhanadi | ma |
retu biTTe nimmanu |
yati kulOttama iMthA |1|

snAna saMdhyAna sujapa |
tapa vrata hOma |
mauna mArgagaLariye ||
j~jAnigaLAnu | saM |
dhAna pUrvaka pUje |
yAnu mADade duShTa |
mAnavaroLagidda |2|

Esu janmadi baMdA |
dOShava kaLedu | vi |
SESha suKava koDuvA ||
I suvArtiya kELi –
morehokka guruprA |
NESa viThThalana dUtA –
matprItA |3|

Leave a Reply

Your email address will not be published. Required fields are marked *

You might also like

error: Content is protected !!