Composer : Shri Gurujagannatha dasaru
ಶರಣು ಶ್ರೀ ಗುರು ರಾಘವೇಂದ್ರಗೆ
ಶರಣು ಯತಿಕುಲತಿಲಕಗೆ [ಪ]
ಶರಣು ಶರಣರ ಪೊರೆವ ಕರುಣಿಗೆ
ಶರಣು ಹರಿಗುಣಲೋಲಗೆ [ಅ.ಪ]
ಮಧ್ವಮತ ಶುಭವಾರ್ಧಿ ಚಂದ್ರಗೆ
ಸಿದ್ಧಸಾಧನ ಮೂರ್ತಿಗೆ
ಬದ್ಧ ಶ್ರೀಹರಿ ದ್ವೇಷಿ ಮಾಯಿಗಳ
ಗೆದ್ದ ರಘುಕುಲ ರಾಮದೂತಗೆ || ೧ ||
ನಿತ್ಯ ನಿರ್ಮಲ ಪುಣ್ಯಗಾತ್ರಗೆ
ಭೃತ್ಯಪಾಲಕ ಸುಗುಣಪಾತ್ರಗೆ
ಸತ್ಯ ಜ್ಞಾನ ಸುಮೋದ ನೇತ್ರಗೆ
ಸ್ತುತ್ಯ ಯತಿವರ ಸುಜನಮಿತ್ರಗೆ || ೨ ||
ಮೋದದಾಯಕ ಭೇದಸಾದಕ
ಮೇದಿನಿ ಸುರಜಾಲ ನಾಯಕ
ಮೋದತೀರ್ಥರ ಚರಣ ಸೇವಕ
ಆದಿ ಗುರುಜಗನ್ನಾಥ ವಿಠಲ ದೂತಗೆ || ೩ ||
SaraNu SrI guru rAGavEMdrage
SaraNu yatikulatilakage [pa]
SaraNu SaraNara poreva karuNige
SaraNu hariguNalOlage [a.pa]
madhvamata SuBavArdhi caMdrage
siddhasAdhana mUrtige
baddha SrIhari dvEShi mAyigaLa
gedda raGukula rAmadUtage || 1 ||
nitya nirmala puNyagAtrage
BRutyapAlaka suguNapAtrage
satya j~jAna sumOda nEtrage
stutya yativara sujanamitrage || 2 ||
mOdadAyaka BEdasAdaka
mEdini surajAla nAyaka
mOdatIrthara caraNa sEvaka
Adi gurujagannAtha viThala dUtage || 3 ||
Leave a Reply