Endu karunadinda noduvi

Composer : Shri Ananthadreesharu

By Smt.Shubhalakshmi Rao

ಎಂದು ಕರುಣದಿಂದ ನೋಡುವಿ ರಾಘ-
ವೇಂದ್ರ ಎಂದು ನಮಗಾನಂದ ನೀಡುವಿ [ಪ]

ಎಂದು ಕರುಣದಿಂದ ನೋಡುವಿ
ನೊಂದು ತಾಪದಿಂದ ಬಹಳ
ಬೆಂದು ನಿನ್ನ ಕಂದನೆಂತೆಂದು ಪಾದಕೆ
ಹೊಂದಿದವನ [ಅ.ಪ]

ದೀನನಾನು ಧೇನಿಸುವೆನೊ ಅನುದಿನ ಕಾಮ
ಧೇನು ದಾನಶೂರನೊ
ದಾನದ ಕುಲದ ನೀಧಾನಿ ಎಂದೆನಿಸಿಕೊಂಬಿ
ದಾನದಲ್ಲಿ ಅಗ್ರಗಣ್ಯ ಉನ್ನತ ದಾನವ ನೀಡಿ (೧)

ಅಲ್ಪ ನಾನು ಜಲ್ಪಕೆಣಿಸುವೆ ಅ-
ನಲ್ಪ ನೀನು ಕಲ್ಪವೃಕ್ಷ ಕಲ್ಪನಲ್ಲವೆ
ಅಲ್ಪರಿಗೆ ಅನಲ್ಪ ಫಲ ಅಕಲ್ಪತಾಗಿ ಕಲ್ಪಿಸುವರೆ
ಅಲ್ಪನವರನಲ್ಪನೆಂದು ಸ್ವಲ್ಪಮನೋ
ಕಲ್ಪವಿಲ್ಲದೆ (೨)

ಗುಣಿಯು ನೀಣು ಅಣಿಯು ಇಲ್ಲದ ದು
ರ್ಗುಣಿಯು ನಾನು ಹಣಿಯೋ ನೀನು ಅಣಿಯೊ ಪಾಪವ
ಧಣಿಯೆ ಚಿನ್ನದ ಖಣಿಯೇ ಚಿಂತಾ
ಮಣಿಯು ನಿನಗೆ ಎಣಿಯು ಇಲ್ಲ ಗುಣಿ ಅನಂತಾದ್ರೀಶನ
ತೋರಿಸು ದಣಿಯಲಾರೆ (೩)


eMdu karuNadiMda nODuvi rAGa-
vEMdra eMdu namagAnaMda nIDuvi [pa]

eMdu karuNadiMda nODuvi
noMdu tApadiMda bahaLa
beMdu ninna kaMdaneMteMdu pAdake
hoMdidavana [a.pa]

dInanAnu dhEnisuveno anudina kAma
dhEnu dAnaSUrano
dAnada kulada nIdhAni eMdenisikoMbi
dAnadalli agragaNya unnata dAnava nIDi (1)

alpa nAnu jalpakeNisuve a-
nalpa nInu kalpavRukSha kalpanallave
alparige analpa Pala akalpatAgi kalpisuvare
alpanavaranalpaneMdu svalpamanO
kalpavillade (2)

guNiyu nINu aNiyu illada du
rguNiyu nAnu haNiyO nInu aNiyo pApava
dhaNiye cinnada KaNiyE ciMtA
maNiyu ninage eNiyu illa guNi anaMtAdreeshana
tOrisu daNiyalAre (3)

Leave a Reply

Your email address will not be published. Required fields are marked *

You might also like

error: Content is protected !!