Composer : Shri Gurugovinda dasaru
ಗುರುರಾಯರ ನಂಬಿರೋ ರಘವೇಂದ್ರ
ಗುರುರಾಯರ ನಂಬಿರೋ (ಪ.)
ಗುರುರಾಯರ ನಂಬಿ ದುರಿತ ದುಷ್ಕೃತ ಹರಿಸಿ
ಪುರುಷಾರ್ಥ ಪರಮವ ಕರಗತ ಕೈಗೊಳ್ಳಿ |ಅ.ಪ|
ಪರಿಮಳೇತ್ಯಾದಿ ಸದ್ ಗ್ರಂಥ ವಿರಚಿಸಿ,
ವರ ಮೋಕ್ಷ ಪ್ರದವೆನಿಸುವಂಥ
ಎರಡೆರಡ್-ಹತ್ತು ಮತ್ತೆರಡೈದು ಗ್ರಂಥವ
ಧರಣಿ ಸುರರಿಗಿತ್ತು ಕರುಣವ ತೋರಿದ (೧)
ರಾಮಕೃಷ್ಣ ನರಹರಿ ವೇದವ್ಯಾಸ,
ಮಾಮನೋಹರ ವೃಂದಾವನದಿ
ವಾಮಾಂಗ ಎನಿಸಿಹ ಶ್ರೀಮಹಿಳೆ ಸಹಿತಾಗಿ
ಕಾಮಿತಾರ್ಥದ ಹರಿ ನೇಮದಿ ನೆಲೆಸೀಹ (೨)
ಕೂಸೆರಡರ ದಯದೀ ಮಂತ್ರಾಲಯ,
ದೇಶಕೆ ಪೋಗಿ ಮುದದಿ
ಲೇಸು ಸೆವೆಯ ಗೈಯ್ಯೆ , ಕಾಸರೋಗವನೀಗಿ ,
ಮೇಶ ಗುರುಗೋವಿಂದ ದಾಸನ್ನಾಗಿಸಿದ (೩)
gururAyara naMbirO raGavEMdra
gururAyara naMbirO (pa.)
gururAyara naMbi durita duShkRuta harisi
puruShArtha paramava karagata kaigoLLi |a.pa|
parimaLEtyAdi sad graMtha viracisi,
vara mOkSha pradavenisuvaMtha
eraDeraD-hattu matteraDaidu graMthava
dharaNi surarigittu karuNava tOrida (1)
rAmakRuShNa narahari vEdavyAsa,
mAmanOhara vRuMdAvanadi
vAmAMga enisiha SrImahiLe sahitAgi
kAmitArthada hari nEmadi nelesIha (2)
kUseraDara dayadI maMtrAlaya,
dESake pOgi mudadi
lEsu seveya gaiyye , kAsarOgavanIgi ,
mESa gurugOviMda dAsannAgisida (3)
Leave a Reply