Gururaja guru sarvabhouma

Composer : Shri Gurujagannatha dasaru

ಗುರುರಾಜ ಗುರುಸಾರ್ವ ಭೌಮ [ಪ]

ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ
ಸರಸಿಜ ಯುಗಗಭಿ ನಮಿಸುವೆ [ಅ.ಪ]

ಕರುಣಾ ಸಾಗರನೆಂದು ಚರಣವ ನಂಬಿದೆ,
ಶರಣನ ಪಾಲಿಸು ಕರುಣೀಯೆ [೧]

ಅನ್ಯರ ಭಜಿಸದೆ ನಿನ್ನನೆ ಭಜಿಸುವೆ,
ಎನ್ನ ಮರೆಯೋದಿದು ನ್ಯಾಯವೆ [೨]

ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ,
ಉನ್ನಂತ ಸುಖದೊಳಗೆ ಇರುವರೋ [೩]

ನಿನ್ನ ಸೇವಿಸಿ ಭವ ಬನ್ನ ಪಡುವದಿದು,
ಎನ್ನ ಅಪರಾದ ವೇನೈಯ್ಯಾ [೪]

ಹಿಂದಿನ ಮಹಿಮದಿಂದೇನು ಎನಗೈಯ್ಯ,
ಇಂದು ಮಹಾಮಹಿಮೆ ತೋರಿಸೊ [೫]

ನಾತನು ನೀನಲ್ಲೆ ದೂತನು ನಾನಲ್ಲೆ,
ಯಾತಕ್ಕೆ ಈ ಥರ ಮಾಡಿದಿ [೬]

ಜ್ಞಾನಿಗಳರಸನೆ ಮೌನಿ ಶಿರೋಮಣಿ
ಧ್ಯಾನವ ಸಂತತ ನೀಡಯ್ಯ [೭]

ಸಂತತ ಎನ್ನ ಮನೊ ಅಂತರದಲಿ ನೀ,
ನಿಂತು ಪಾಲಿಸು ಎನ್ನ ಮಹರಾಯಾ [೮]

ನಿನ್ನಲ್ಲಿ ಹರಿ ದಯಾ ಉನ್ನಂತ ಇರಲಿನ್ನು,
ಎನ್ನಲ್ಲಿ ನಿನ್ನ ದಯಾ ಇರಲಯ್ಯ [೯]

ದಾತ ಗುರು ಜಗನ್ನಾಥ ವಿಠ್ಠಲ
ನಿನ್ನ ಮಾತು ಲಾಲಿಸಿದಂತೆ ಪೊರೆ ಯೆನ್ನ [೧೦]


gururAja gurusArva Bauma [pa]

gururAja gurusArvaBauma ninnaya pAda
sarasija yugagaBi namisuve [a.pa]

karuNA sAgaraneMdu caraNava naMbide,
SaraNana pAlisu karuNIye [1]

anyara Bajisade ninnane Bajisuve,
enna mareyOdidu nyAyave [2]

ninna sEviparige innuMTe Baya SOka,
unnaMta suKadoLage iruvarO [3]

ninna sEvisi Bava banna paDuvadidu,
enna aparAda vEnaiyyA [4]

hiMdina mahimadiMdEnu enagaiyya,
iMdu mahAmahime tOriso [5]

nAtanu nInalle dUtanu nAnalle,
yAtakke I thara mADidi [6]

j~jAnigaLarasane mauni SirOmaNi
dhyAnava saMtata nIDayya [7]

saMtata enna mano aMtaradali nI,
niMtu pAlisu enna maharAyA [8]

ninnalli hari dayA unnaMta iralinnu,
ennalli ninna dayA iralayya [9]

dAta guru jagannAtha viThThala
ninna mAtu lAlisidaMte pore yenna [10]

Leave a Reply

Your email address will not be published. Required fields are marked *

You might also like

error: Content is protected !!