Vedava tandu

Composer : Shri Vadirajaru

By Smt.Shubhalakshmi Rao

ವೇದವ ತಂದು ವಿಧಿಗೀವಂದೆ ನೀ
ಸಾಧು ಜನರ ಸಲಹಲಿ ಬಂದೆ |ಪ|

ಮೋದದಿಂದೆಮ್ಮ ಮನದಿ ನಿಂದೆ
ನೀ ಬಾಧಿಪ ದುರಿತತತಿಯ ಕೊಂದೆ |ಅ.ಪ|

ಸಕಲ ಸುರರಿಗೆ ಶಿರೋರನ್ನ
ನೀ ಅಕಳಂಕಾಶ್ರಿತ ಜನಮಾನ್ಯ
ನಿಖಿಲ ನಿಗಮನಿಕರದಿ ವರ್ಣ್ಯ
ನೀ ಕರುಣಾ ಕಟಾಕ್ಷದಿ ನೋಡೆನ್ನ |೧|

ಕೈವಲ್ಯ ಪದವಿಯ ಕೊಡಬಲ್ಲ
ನಿನ್ನ ಸೇವಿಪ ಸುಜನರಿಗೆಣೆಯಿಲ್ಲ
ಭಾವಜ ಕೋಟಿಯಿಂದತಿ ಚೆಲ್ವ
ನೀ ಶ್ರೀವನಿತೆಗೆ ಸಿಲುಕುವನಲ್ಲ |೨|

ಹಯವದನ ಹೃದಯ ಸದನ
ಜಯ ಶಶಿವರ್ಣ ಜಗತಿಪೂರ್ಣ
ಭಯಹರ ಭಾಸುರ ಸಿರಿ ಚರಣ
ನಿನ್ನದಯ ಪಾತ್ರಾನುದ್ಧರಿಸೆನ್ನ |೩|


vEdava taMdu vidhigIvaMde nI
sAdhu janara salahali baMde |pa|

mOdadiMdemma manadi niMde
nI bAdhipa duritatatiya koMde |a.pa|

sakala surarige SirOranna
nI akaLaMkASrita janamAnya
niKila nigamanikaradi varNya
nI karuNA kaTAkShadi nODenna |1|

kaivalya padaviya koDaballa
ninna sEvipa sujanarigeNeyilla
BAvaja kOTiyiMdati celva
nI SrIvanitege silukuvanalla |2|

hayavadana hRudaya sadana
jaya SaSivarNa jagatipUrNa
Bayahara BAsura siri caraNa
ninnadaya pAtrAnuddharisenna |3|

Leave a Reply

Your email address will not be published. Required fields are marked *

You might also like

error: Content is protected !!