Composer : Shri Vadirajaru
ಮನ್ನಿಸೆನ್ನ ಮಧುಸೂದನ ||ಪ||
ಮದನನಯ್ಯ ಮೋಹನ ಕಾಯ
ಉನ್ನತ ಗುಣ ನಿಲಯ
ಉಡುಪಿನ ಕೃಷ್ಣರಾಯ ||ಅ.ಪ||
ಶ್ರುತಿಗಳ ತಂದೆ ಮುನ್ನ ಸುರಮುನಿಗಳ
ಮನ-ಕತಿ ಹರುಷವ ಕೊಟ್ಟೆ ಅಗಣಿತ ಗುಣರನ್ನ
ಯತಿಗಳ ಪಾಲಿಸಿದೆ ಮುಂದುವರಿವ ದಿತಿಜರ ಸೋಲಿಸಿದೆ
ಈ ಮಹಿಯೊಳು ಮತಿವಂತರ ಪೊರೆದೆ, ಮಹಿಮೆಯಿಂದ ಮೆರೆದೆ [೧]
ಅಚ್ಚ ಹಾರ ಶೋಭಿತ ಕಂಠ ಆಶ್ರಿತರಿಗೆ ನೀ ನೆಂಟ
ಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರ
ಮೆಚ್ಚಿದ ನಿನ್ನಯ ವೈಕುಂಠದ ಮುಚ್ಚಳ ತೆಗೆಸಲು ಶಕ್ತ
ಅಚ್ಯುತ ನಿನ್ನ ಅರ್ಚಿಸಿದವ ಕೃತಾರ್ಥ, ಅವನೆ ಸರ್ವಸಮರ್ಥ [೨]
ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳು
ವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದ
ತಂದೆ ನೀನೆ ತಾಯಿ ನೀನೆ ಹಯವದನ ಬಂಧು ನೀನೆ ಬಳಗ ನೀನೆ
ಮತ್ತದರಿಂದ ಕುಂದು ಮಾಡುವುದು ಬಿಡೋ, ಕಂಡು ಕರುಣವ ಮಾಡೋ [೩]
mannisenna madhusUdana ||pa||
madananayya mOhana kAya
unnata guNa nilaya
uDupina kRuShNarAya ||a.pa||
SrutigaLa taMde munna suramunigaLa
mana-kati haruShava koTTe agaNita guNaranna
yatigaLa pAliside muMduvariva ditijara sOliside
I mahiyoLu mativaMtara porede, mahimeyiMda merede [1]
acca hAra SOBita kaMTha ASritarige nI neMTa
meccida pArthana mitraneniside sucaritra
meccida ninnaya vaikuMThada muccaLa tegesalu Sakta
achyuta ninna arcisidava kRutArtha, avane sarvasamartha [2]
eMdeMdu ninnavaroLu enna kUDiso kRupALu
vaMdya garuDana skaMdhavEri baha gOviMda
taMde nIne tAyi nIne hayavadana baMdhu nIne baLaga nIne
mattadariMda kuMdu mADuvudu biDO, kaMDu karuNava mADO [3]
Leave a Reply