Laali adida Ranga

Composer : Shri Vadirajaru

By Smt.Shubhalakshmi Rao

ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]
ಬಾಲೆ ರುಕ್ಮಿಣಿ ದೇವೇರೊಡನೆ
ಮೂರು ಲೋಕನಾಳ್ವ ದೊರೆಯು [ಅ.ಪ]

ಸಾಧು ಮಚ್ಚಕಚ್ಚಪ ರೂಪನಾಗಿ
ಭೇದಿಸಿ ತಮನ ಕೊಂದು
ವೇದವನ್ನು ಮಗನಿಗಿತ್ತು
ಭೂದೇವಿಯರೊಡನೆ ಕೃಷ್ಣ (೧)

ಬೆಟ್ಟವನ್ನು ಬೆನ್ನಲಿಟ್ಟು
ಮಿತ್ರೆ ಮೋಹಿನಿ ರೂಪತಾಳಿ
ಭಕ್ತರಿಗೆ ಅಮೃತ ಬಡಿಸಿ
ಸತ್ಯಭಾಮೆಯರೊಡನೆ ಕೃಷ್ಣ (೨)

ಕ್ರೋಡ ವರಾಹ ರೂಪನಾಗಿ
ಆದಿ ಹಿರಣ್ಯಕನ ಕೊಂದು
ಮೇದಿನಿಯ ಮೇಲಕೆ ತಂದು
ರಾಧೆಯೊಡನೆ ನಗುತ ಕೃಷ್ಣ (೩)

ಪುಟ್ಟಬಾಲನ ನುಡಿಯ ಕೇಳಿ
ಕೆಟ್ಟ ಕಶ್ಯಪನುದರ ಸೀಳಿ
ಅಷ್ಟ ಮಂಗಳವಾದ್ಯವಾಗಲು
ಅಷ್ಟ ಸ್ತ್ರೀಯರೊಡನೆ ಕೃಷ್ಣ (೪)

ಯುಕುತಿಯಿಂದ ಭೂಮಿ ಅಳೆದು
ಭಕುತ ಬಲಿಯ ತಲೆಯ ತುಳಿದು
ಶಕುತನೆಂದು ಪೊಗಳೆ ಸುರರು
ಲಕುಮಿಯೊಡನೆ ನಗುತ ಕೃಷ್ಣ (೫)

ಯುದ್ಧದಲಿ ಕೊಡಲಿ ಪಿಡಿದು
ಗುದ್ದಿ ಕ್ಷತ್ರೇರ ಶಿರವ ತರಿದು
ಗೆದ್ದ ಸಿಂಹನೆನಿಸಿಕೊಂಡು
ಪದ್ಮಾವತಿಯ ಕೂಡೆ ಕೃಷ್ಣ (೬)

ಸೇತು ಬಂಧನವನ್ನೆ ಮಾಡಿ
ಧೂರ್ತ ರಾವಣನ್ನ ಕೊಂದು
ಖ್ಯಾತಿಪಡೆದು ಪುರಕೆ ಬಂದು
ಸೀತೆಯೊಡನೆ ರಾಮಚಂದ್ರ (೭)

ಒಂದು ಏಳು ಎಂಟುಸಾವಿರ
ಇಂದುಮುಖಿಯರನ್ನು ಕೂಡಿ
ಮಂದ ಮಾರುತ ಚಂದ್ರ ಬರಲು
ನಂದಗೋಕುಲದ ದೊರೆಯು (೮)

ಅಂಬರವ ತೊರೆದು ದಿಗಂಬರ
ವೇಷವನ್ನೆ ಧರಿಸಿ
ಮಂಗಳಾಂಗ ಮಾರಜನಕ
ರಂಗನಾಯಕಿಯೊಡನೆ ಕೃಷ್ಣ (೯)

ಅಚ್ಚ ಮುತ್ತಿನಾಭರಣವಿಟ್ಟು
ಲಕ್ಷವಿಲ್ಲದೆ ಹಯವನೇರಿ
ಭಕುತರಿಗೆ ಅಭಯ ಕೊಡುತ
ಭಕ್ತವತ್ಸಲ ಹಯವದನ (೧೦)


lAli ADida raMga lAli ADida [pa.]
bAle rukmiNi dEvEroDane
mUru lOkanALva doreyu [a.pa]

sAdhu maccakaccapa rUpanAgi
BEdisi tamana koMdu
vEdavannu maganigittu
BUdEviyaroDane kRuShNa (1)

beTTavannu bennaliTTu
mitre mOhini rUpatALi
Baktarige amRuta baDisi
satyaBAmeyaroDane kRuShNa (2)

krODa varAha rUpanAgi
Adi hiraNyakana koMdu
mEdiniya mElake taMdu
rAdheyoDane naguta kRuShNa (3)

puTTabAlana nuDiya kELi
keTTa kaSyapanudara sILi
aShTa maMgaLavAdyavAgalu
aShTa strIyaroDane kRuShNa (4)

yukutiyiMda BUmi aLedu
Bakuta baliya taleya tuLidu
SakutaneMdu pogaLe suraru
lakumiyoDane naguta kRuShNa (5)

yuddhadali koDali piDidu
guddi kShatrEra Sirava taridu
gedda siMhanenisikoMDu
padmAvatiya kUDe kRuShNa (6)

sEtu baMdhanavanne mADi
dhUrta rAvaNanna koMdu
KyAtipaDedu purake baMdu
sIteyoDane rAmacaMdra (7)

oMdu ELu eMTusAvira
iMdumuKiyarannu kUDi
maMda mAruta caMdra baralu
naMdagOkulada doreyu (8)

aMbarava toredu digaMbara
vEShavanne dharisi
maMgaLAMga mArajanaka
raMganAyakiyoDane kRuShNa (9)

acca muttinABaraNaviTTu
lakShavillade hayavanEri
Bakutarige aBaya koDuta
Baktavatsala hayavadana (10)

Leave a Reply

Your email address will not be published. Required fields are marked *

You might also like

error: Content is protected !!